ತಿರುವನಂತಪುರಂ: ಉಮ್ಮನ್ ಚಾಂಡಿ ಅವರ ನಿಧನದಿಂದ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾನ ತೆರವಾಗಿರುವ ಬಗ್ಗೆ ವಿಧಾನಸಭೆ ಇಂದು ಪ್ರಕಟನೆ ಹೊರಡಿಸಿದೆ.
ಇದರ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು. ಇದರೊಂದಿಗೆ ಆರು ತಿಂಗಳೊಳಗೆ ಉಪಚುನಾವಣೆ ನಡೆಸುವ ಪ್ರಕ್ರಿಯೆಯನ್ನೂ ಚುನಾವಣಾ ಆಯೋಗ ನಡೆಸಲಿದೆ.
ಇತರೆ ರಾಜ್ಯಗಳ ಉಪಚುನಾವಣೆ ಜತೆಗೆ ಇಲ್ಲೂ ನಡೆಯುವ ಸಾಧ್ಯತೆ ಇದೆ. ಎರಡನೇ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೇ ಉಪಚುನಾವಣೆ ಇದಾಗಲಿದೆ. ಶಾಸಕ ಪಿಟಿ ಥಾಮಸ್ ನಿಧನರಾದ ನಂತರ ರಾಜ್ಯದಲ್ಲಿ ಕಳೆದ ಉಪಚುನಾವಣೆ ತೃಕ್ಕಾಕರದಲ್ಲಿ ನಡೆದಿತ್ತು.