ಕಣ್ಣೂರು: ಕಣ್ಣೂರು ಜಿಲ್ಲೆ ಕೇಂದ್ರೀಕರಿಸಿ ಆನ್‍ಲೈನ್‍ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ಕೋಟ್ಯಂತರ ವಂಚನೆ ನಡೆದಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
ವಂಚನೆಗೆ ಒಳಗಾದವರು 2ರಿಂದ 35 ಲಕ್ಷ ರೂ.ವರೆಗೂ ಕಳಕೊಂಡಿದ್ದಾರೆ. ಈ ಭಾರಿ ವಂಚನೆಯ ಹಿಂದೆ ಉತ್ತರ ಭಾರತದ ವ್ಯಕ್ತಿಗಳ ಕೈವಾಡವಿರಬಹುದು ಎಂದು ಸೈಬರ್ ಪೋಲೀಸರು ತೀರ್ಮಾನಿಸಿದ್ದಾರೆ. ಕಳೆದ ತಿಂಗಳು ಇದೇ ರೀತಿಯ ವಂಚನೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ನಂತರ ಮಹಿಳೆಯ ವಾಟ್ಸ್ಆ್ಯಪ್‍ನಿಂದ ವಂಚನೆ ಕುರಿತ ಚಾಟ್ ಪತ್ತೆಯಾಗಿದೆ.
ಕಣ್ಣೂರಿನ ಯುವಕನಿಗೆ ವಾಟ್ಸ್ ಆ್ಯಪ್ ಮೂಲಕ ಬಂದ ಮೊದಲ ಸಂದೇಶ ಪಾರ್ಟ್ ಟೈಮ್ ಕೆಲಸ ಬೇಕೇ ಎಂದು. ಯುವಕ ಆಸಕ್ತಿ ವ್ಯಕ್ತಪಡಿಸಿದಾಗ ಯೂಟ್ಯೂಬ್ ಚಾನೆಲ್ ಇಷ್ಟವಾದರೆ ಐವತ್ತು ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದರು.
ವಾಟ್ಸ್ಆ್ಯಪ್‍ನಲ್ಲಿ ಸ್ಕ್ರೀನ್‍ಶಾಟ್ ಕಳುಹಿಸಿದ ನಂತರ ಖಾತೆಗೆ ಹಣ ಬಂದಿದೆ. ಇದಾದ ನಂತರ ಹತ್ತು ಸಾವಿರ ರೂಪಾಯಿ ಕೊಟ್ಟರೆ ಹದಿನೈದು ಸಾವಿರದವರೆಗೆ ಲಾಭ ಪಡೆಯಬಹುದೆಂಬ ಸೂಚನೆ ಬಂದಿತ್ತು. ಇದನ್ನೂ ಅನುಸರಿಸಿದಾಗ ಯುವಕನಿಗೆ ಈ ಗುಂಪಿನ ಮೇಲೆ ನಂಬಿಕೆ ಬಲವಾಯಿತು. ಇದಾದ ಬಳಿಕ ವಾಟ್ಸಾಪ್ ನಿಂದ ಟೆಲಿಗ್ರಾಮ್ ಗೆ ಸ್ಥಳಾಂತರಗೊಂಡಿತು ಆ ಕಂಪೆನಿ. ಟೆಲಿಗ್ರಾಮ್ ಗ್ರೂಪ್‍ಗೆ ಸೇರಿಸಿದ್ದು, ಭಾರಿ ಲಾಭ ಗಳಿಸುತ್ತಿರುವ ಸದಸ್ಯರೊಂದಿಗೆ ಸೇರಿಸಬಹುದು ಎಂದು ಹೇಳಿ ದಾರಿ ತಪ್ಪಿಸಲಾಗಿದೆ. ಇದು ಕ್ರಿಪೆÇ್ಟೀ ಕರೆನ್ಸಿ ವಹಿವಾಟು ಎಂದು ಹೇಳಿಕೊಂಡು ಮತ್ತೆ ಹಣವನ್ನು ಖರೀದಿಸಿದೆ.
ನಂತರ ಹಣ ಕಳಿಸಿದ ನಂತರ, ಲಾಭ ಸೇರಿದಂತೆ ಪಾವತಿಸಲು ತೆರಿಗೆ ಪಾವತಿಸಲು ಹೇಳಿದರು. ಎರಡು ವಾರಗಳಲ್ಲಿ ಸುಮಾರು ಮೂವತ್ತು ಲಕ್ಷ ರೂಪಾಯಿ ನಷ್ಟವಾದಾಗ ಘಟನೆಯನ್ನು ವಂಚನೆ ಎಂದು ಗುರುತಿಸಲಾಗಿದೆ. ಯುವಕ ಬ್ಯಾಂಕ್‍ನಿಂದ ಸಾಲ ಪಡೆದು ಮೊತ್ತವನ್ನು ಕಳೆದುಕೊಂಡಿದ್ದಾನೆ. ಸರ್ಕಾರಿ ಅಧಿಕಾರಿಗಳಿಂದ ಹಿಡಿದು ಗೃಹಿಣಿಯರ ಹಣದವರೆಗೂ ಈ ಗ್ಯಾಂಗ್ ವಂಚಿಸಿದೆ. ಘಟನೆಯ ಬಳಿಕ ನಿನ್ನೆಯμÉ್ಟೀ ಸೈಬರ್ ಪೋಲೀಸರಿಗೆ ಎಂಟು ದೂರುಗಳು ಬಂದಿವೆ. ನೂರಾರು ಮಂದಿ ವಂಚನೆಗೊಳಗಾಗಿದ್ದರೂ ಹಲವರು ದೂರು ದಾಖಲಿಸಲು ಮುಂದಾಗುತ್ತಿಲ್ಲ ಎನ್ನಲಾಗಿದೆ.