ತಿರುವನಂತಪುರಂ: ನಕಲಿ ಪದವಿ ಪ್ರಮಾಣಪತ್ರ ಪ್ರಕರಣದಲ್ಲಿ ನಿಖಿಲ್ ಥಾಮಸ್ ಗೆ ಜಾಮೀನು ಮಂಜೂರಾಗಿದೆ. ಕಟ್ಟುನಿಟ್ಟಿನ xರತ್ತುಗಳೊಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಜಿಯಾದ್ ರಹಮಾನ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ. ಜೂನ್ 23 ರಂದು ನಿಖಿಲ್ ಅವರನ್ನು ಬಂಧಿಸಲಾಗಿತ್ತು.
ನಿಖಿಲ್ ಥಾಮಸ್ ಬಿಕಾಂ ಪಾಸಾಗದೇ ಕಾಯಂಕುಐಂ ಎಂಎಸ್ ಎಂ ಕಾಲೇಜಿನಲ್ಲಿ ಎಂಕಾಂ ಸೇರಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿ, ಕಳಿಂಗ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಎಂಎಸ್‍ಎಂ ಕಾಲೇಜು ಪ್ರಾಂಶುಪಾಲರು ಕಳಿಂಗ ವಿಶ್ವವಿದ್ಯಾಲಯದ ದಾಖಲೆಗಳು ನಕಲಿ ಎಂದು ಖಚಿತಪಡಿಸಿದ್ದಾರೆ.