ಕೊಟ್ಟಾಯಂ: ತಾನು ಉಮ್ಮನ್ ಚಾಂಡಿ ಪುತ್ರಿ ಎಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಿದ್ದು, ರಾಜಕೀಯದಲ್ಲಿ ಸಕ್ರಿಯಳಾಗುವುದಿಲ್ಲ ಎಂದು ಅಚ್ಚು ಉಮ್ಮನ್ ಹೇಳಿದ್ದಾರೆ.
ಪುದುಪಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಚರ್ಚೆ ನಡೆಯುತ್ತಿರುವಾಗಲೇ ಉಮ್ಮನ್ ಚಾಂಡಿ ಪುತ್ರಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ತಾನು ರಾಜಕೀಯ ಸೇರುವ ಕನಸು ಕೂಡ ಕಂಡಿಲ್ಲ. ತಂದೆಯ ನಂತರ ಚಾಂಡಿ ಉಮ್ಮನ್ ರಾಜಕಾರಣದಲ್ಲಿ ಮುಂದುವರಿಯುವರು. ತನ್ನ ಹೆಸರಿನ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ನಿಲ್ಲಿಸಬೇಕು ಎಂದು ಪುತ್ರಿ ಅಚ್ಚು ಉಮ್ಮನ್ ಹೇಳಿದರು. ನನ್ನ ತಂದೆ ತೀರಿಕೊಂಡ ನಂತರ ಇಷ್ಟು ಬೇಗ ಇಂತಹ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದಿರುವರು.
ತನ್ನ ತಂದೆಯವರು ಭಾಗವಹಿಸುತ್ತಿದ್ದ ಎಲ್ಲ ಸಮಾರಂಭಗಳಲ್ಲೂ ಜನಜಂಗುಳಿ ಇರುತ್ತಿತ್ತು. ಅವರು ಸದಾ ಜನಸಂದಣಿಯಲ್ಲಿ ಇರುತ್ತಿದ್ದರು. ಜೊತೆಗೆ ಅವರ ಅಂತಿಮ ಯಾತ್ರೆಯ ಸುದ್ದಿಯನ್ನು ನೋಡಿದಾಗ, ಉಮ್ಮನ್ ಚಾಂಡಿ ಮೇಲಿನ ಪ್ರೀತಿ ಎμÉ್ಟೂೀ ಜನರ ಹೃದಯದಲ್ಲಿ ಆಳವಾಗಿದೆ ಎಂದು ಅರ್ಥವಾಯಿತು ಎಂದು ಅವರು ಹೇಳಿದರು.