ಮಾನವ ಚಂದ್ರನಲ್ಲಿ ಪ್ರಪ್ರಥಮವಾಗಿ ಕಾಲಿರಿಸಿದ ದಿನವಾದ ಜುಲೈ 21 ನ್ನು ಚಾಂದ್ರದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಅವರು ಮಕ್ಕಳು ತಯಾರಿಸಿದ ಚಂದ್ರಲೋಕಕ್ಕೆ ಎಂಬ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಬಾಹ್ಯಾಕಾಶ ಹಾಗೂ ಚಂದ್ರನ ಕುರಿತಾದ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳು ನಿರೂಪಿಸಿದ ಬೆಲೂನ್ ರಾಕೆಟ್, ನೀಲ್ ಆರ್ಮ್ ಸ್ಟ್ರಾಂಗ್, ಸೌರವ್ಯೂಹದ ಮಾದರಿ ಗಮನಸೆಳೆಯಿತು. ವಿಡಿಯೋ ಪ್ರದರ್ಶನ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆಯಿತು. ಸ್ಟಾಫ್ ಸೆಕ್ರೆಟರಿ ದಾಸಪ್ಪ ಮಾಸ್ಟರ್, ಎಸ್. ಆರ್.ಜಿ ಕನ್ವೀನರ್‍ಗಳಾದ ನಜುಮ್ಮುನಿಸಾ ಟೀಚರ್, ಶಾರದಾ ಟೀಚರ್ ಉಪಸ್ಥಿತರಿದ್ದರು. ಕಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.