HEALTH TIPS

'ಆದಿಪುರುಷ್' ಪಿಐಎಲ್ ವಜಾ: ಸಹಿಷ್ಣುತೆಯ ಮಟ್ಟ ಕುಸಿಯುತ್ತಿದೆ- ಸುಪ್ರೀಂ ಕೋರ್ಟ್

                    ವದೆಹಲಿ (PTI): ವಿವಾದಿತ 'ಆದಿಪುರುಷ್' ಸಿನಿಮಾಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ನೀಡಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ಸಮಾಜದಲ್ಲಿ ಸಹಿಷ್ಣುತೆಯ ಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

                 ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಸಿನಿಮಾವು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದಿದೆ. ಈಗ ಈ ನ್ಯಾಯಾಲಯವು ಮಧ್ಯಪ್ರವೇಶಿಸುವುದು ಸೂಕ್ತವಲ್ಲ. ಸಿನಿಮಾದಲ್ಲಿರುವ ಪ್ರಾತಿನಿಧ್ಯವು ರಾಮಾಯಣ ಪಠ್ಯದಲ್ಲಿ ನಿಖರವಾದ ಪ್ರತಿರೂಪವಲ್ಲ ಎಂದೂ ಅಭಿಪ್ರಾಯಪಟ್ಟಿದೆ.

                    ಇಂಥ ವಿಷಯಗಳನ್ನು ನ್ಯಾಯಾಲಯಗಳು ಪರಿಗಣಿಸಬಾರದು ಎಂದೂ ನ್ಯಾಯಪೀಠವು ಹೇಳಿದೆ.

                  'ಭಾರತದ ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ಇಂಥ ವಿಷಯಗಳನ್ನು ನಾವು ಏಕೆ ಪರಿಗಣಿಸಬೇಕು? ನೀವು (ಅರ್ಜಿದಾರರು) ಪ್ರತಿಸಲವೂ ಸುಪ್ರೀಂ ಕೋರ್ಟ್‌ಗೆ ಬಂದಾಗ ನಾವು ಎಲ್ಲವನ್ನೂ ಪರಿಶೀಲಿಸಬೇಕೇ? ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳು, ಪುಸ್ತಕಗಳ ವಿಷಯಗಳಲ್ಲಿ ಸಹಿಷ್ಣುತೆಯ ಮಟ್ಟ ಕುಸಿಯುತ್ತಿದೆ' ಎಂಬುದನ್ನು ನ್ಯಾಯಪೀಠವು ಗಮನಿಸಿತು.

                   'ಆದಿಪುರುಷ್' ಸಿನಿಮಾದಲ್ಲಿ ಪವಿತ್ರ ಗ್ರಂಥ 'ರಾಮಾಯಣ'ವನ್ನು ತಿರುಚಲಾಗಿದ್ದು, ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಕೋರಿ ವಕೀಲರಾದ ಮಮತಾ ರಾಣಿ ಅವರು ಅರ್ಜಿ ಸಲ್ಲಿಸಿದ್ದರು.

                              'ಆದಿಪುರುಷ್‌' ಬಾಕಿ ಉಳಿದಿರುವ ಪ್ರಕ್ರಿಯೆಗಳಿಗೆ 'ಸುಪ್ರೀಂ' ತಡೆ

              : ವಿವಾದಿತ ಚಲನಚಿತ್ರ 'ಆದಿಪುರುಷ್‌'ಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

                  ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿದಾರರಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.

                 ಮಹಾಕಾವ್ಯ ರಾಮಾಯಣ ಆಧರಿತವಾಗಿರುವ 'ಆದಿಪುರುಷ್‌' ಸಂಭಾಷಣೆ ಮತ್ತು ರಾಮಾಯಣದ ಪಾತ್ರಗಳನ್ನು ಅಸಂಬದ್ಧವಾಗಿ ಚಿತ್ರಿಸಲಾಗಿದೆ ಎನ್ನುವ ಕಾರಣಕ್ಕಾಗಿ ವಿವಾದಕ್ಕೊಳಗಾಗಿದೆ.

                    'ಆದಿಪುರುಷ್‌' ಸಿನಿಮಾವನ್ನು ನಿಷೇಧಿಸಬೇಕೆಂದು ಕೋರಿ ಕುಲದೀಪ್ ತಿವಾರಿ ಮತ್ತು ನವೀನ್ ಧವನ್ ಎಂಬುವರು ಅಲಹಾಬಾದ್ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು. ಮನವಿಗಳನ್ನು ಆಲಿಸಿದ್ದ ಅಹಮದಾಬಾದ್ ಹೈಕೋರ್ಟ್ ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಸಂಭಾಷಣೆಕಾರ ಮನೋಜ್ ನಿರ್ದೇಶಕ ಓಂ ರಾವುತ್ ಅವರಿಗೆ ಜುಲೈ 27ರೊಳಗೆ ತಮ್ಮ ಪ್ರತಿಕ್ರಿಯೆ ದಾಖಲಿಸಲು ಕೋರ್ಟ್‌ಗೆ ಹಾಜರಾಗಲು ಜೂನ್ 30ರಂದು ನಿರ್ದೇಶನ ನೀಡಿತ್ತು. ಈ ಸಿನಿಮಾವು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವಂತಿದೆಯೇ ಎನ್ನುವ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಿಳಿಸಲು ಐವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries