ಕಾಸರಗೋಡು: ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ರಸ್ತೆ ಎಂದು ಭಾವಿಸಿ ತನ್ನ ಕಾರನ್ನು ಸುಮಾರು 20 ಮೀಟರ್ ವರೆಗೆ ರೈಲ್ವೆ ಹಳಿಯಲ್ಲಿ ಚಲಾಯಿಸಿದ್ದಾನೆ! ಕಣ್ಣೂರು ಜಿಲ್ಲೆಯಲ್ಲಿ ಗುರುವಾರ ರಾತ್ರಿ ಘಟನೆ. ಈ ಸಂದರ್ಭ ರೈಲು ಸಂಚಾರವಿಲ್ಲದ ಕಾರಣ ದುರಂತ ತಪ್ಪಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಂಜರಕಂಡಿ ನಿವಾಸಿ ಜಯಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ತಾಯೆ ಚೆವ್ವ ಬಳಿ ರೈಲ್ವೆ ಗೇಟಿನಿಂದ ನೇರ ಹಳಿಯತ್ತ ಸಾಗಿದ್ದಾನೆ ಅಲ್ಪ ದೂರ ಸಂಚರಿಸಿದ ಕಾರು, ರೈಲ್ವೆ ಹಳಿಗಳ ಮಧ್ಯೆ ಸಿಲುಕಿಕೊಂಡಿದೆ. ತಕ್ಷಣ ಗೇಟ್‍ಕೀಪರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಾರನ್ನು ರೈಲ್ವೆ ಹಳಿಯಿಂದ ಹೊರಕ್ಕೆ ಸಾಗಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಪೊಲೀಸ್ ಠಾಣೆಯಿಂದ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಈತನ ವಿರುದ್ಧ ರೈಲ್ವೆ ಆ್ಯಕ್ಟ್ ಹಾಗೂ ಕುಡಿದು ವಾಹನ ಚಲಾಯಿಸಿರುವುದರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಾರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅತಿಯಾಗಿ ಮದ್ಯ ಸೇವಿಸಿದ ಪರಿಣಾಮ ರೈಲ್ವೆ ಹಳಿಯತ್ತ ಕಾರು ಚಲಾಯಿಸಿಕೊಂಡು ಸಾಗಿದ್ದಾನೆ.