HEALTH TIPS

ಇಡಯಿಲ್ ಕಾವ್ ಇನ್ನು ಜೀವವೈವಿಧ್ಯ ಪರಂಪರೆಯ ಪಟ್ಟಿಗೆ ಸೇರ್ಪಡೆಯತ್ತ: ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ನಿರ್ಧಾರ

               ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಇಡಯಿಲ್ ಕಾವ್ (ಕಾವ್-ವನ)  ಜೀವವೈವಿಧ್ಯ ಪರಂಪರೆ ಕೇಂದ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ. ಉತ್ತರ ಕೇರಳದ ಅತಿದೊಡ್ಡ ಕಾವ್‍ಗಳಲ್ಲಿ ಒಂದಾದ ಇಡಯಿಲ್ ಕಾವ್ ಕಾವ್ ಅನ್ನು ಜೀವವೈವಿಧ್ಯ ಪರಂಪರೆಯ ತಾಣವೆಂದುÉÇ್ಘೀಷಿಸಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ. ಪಾರಂಪರಿಕ ಸ್ಥಾನಮಾನ ಪಡೆಯುವ ಮೂಲಕ ಕಾವಿನ ಜೀವವೈವಿಧ್ಯತೆ ಹಾಗೂ ಕಾವಿನ  ಆಚಾರ ವಿಚಾರಗಳನ್ನು ಉಳಿಸಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲಿದೆ. ಪಾರಂಪರಿಕ ಸ್ಥಾನಮಾನಕ್ಕೆ ಏರಿಸಿದರೆ, ಇಡಯಿಲ್ ಕಾವ್ ಈ ಮನ್ನಣೆಯನ್ನು ಪಡೆದ ಕೇರಳದ ಎರಡನೇ ಪ್ರದೇಶವಾಗಲಿದೆ. ಕೊಲ್ಲಂ ಜಿಲ್ಲೆಯ ಆಶ್ರಮ ಮ್ಯಾಂಗ್ರೋವ್ ಅರಣ್ಯವು ರಾಜ್ಯದ ಮೊದಲ ಜೀವವೈವಿಧ್ಯ ಪರಂಪರೆಯ ತಾಣವಾಗಿದೆ.

       ಇಡಯಿಲ್ ಕಾವ್ ವಿಸ್ತಾರವಾದ ಹರವಿನ ಕವ್ವಾಯಿ ಹಿನ್ನೀರಿನ  ಪ್ರಮುಖವಾದ ಆಕರ್ಷಣೆಯಾಗಿದೆ. ವಿಸ್ತೀರ್ಣ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಲ್ಲಿ ಸಮೃದ್ಧವಾಗಿರುವ ಕಾವ್ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುವ ಅನೇಕ ಗಿಡಮೂಲಿಕೆ ಔಷಧಿಗಳ ಭಂಡಾರವಾಗಿದೆ. ಕವ್ವಾಯಿ ಹಿನ್ನೀರಿನ ಮಧ್ಯದಲ್ಲಿ 312 ಎಕರೆ ವಿಸ್ತಾರದ ಇಡಯಿಲ್ ಕಾವ್ ನಲ್ಲಿ 16 ಎಕರೆ ಪ್ರದೇಶದಲ್ಲಿ ಜೀವವೈವಿಧ್ಯದಿಂದ ತುಂಬಿದೆ. ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವ ಇಲ್ಲಿ ಹೆಚ್ಚಿನ ಸಂಖ್ಯೆಯ ಕೋತಿಗಳು, ಜಲಪಕ್ಷಿಗಳು ಮತ್ತು ಕಾಡುಕೋಳಿಗಳನ್ನು ಹೊಂದಿದೆ. 87 ಜಾತಿಯ ಪಕ್ಷಿಗಳಲ್ಲಿ 11 ಜಾತಿಯ ಜಲಪಕ್ಷಿಗಳು ಮತ್ತು 53 ಜಾತಿಯ ಕಾಡು ಪಕ್ಷಿಗಳು ಸೇರಿವೆ. ಹ್ಯಾರಿಯರ್, ಬಜಾರ್ಡ್, ಮಿಂಚುಳ್ಳಿ ಮತ್ತು ಕಣಜ ಗೂಬೆ ಅಪರೂಪದ ಜಾತಿಯ ಪಕ್ಷಿಗಳು. ಅಳಿವಿನಂಚಿನಲ್ಲಿರುವ ಬಿಳಿ-ಹೊಟ್ಟೆಯ ಸಮುದ್ರ ಗಿಡುಗವನ್ನು ಕವಾಯಿಯಲ್ಲಿ ಕಾಣಬಹುದು. ಕಾವಿನ ಎರಡು ಅಪರೂಪದ ಜಾತಿಯ ಮರ ಕಂಡುಬಂದಿದೆ. ಅಳಿವಿನಂಚಿನಲ್ಲಿರುವ ಏಕನಾಯಕ ಮತ್ತು ಪಣಚಿ, ಮಂಗಗಳ ಮುಖ್ಯ ಆಹಾರ ಜಾತಿಗಳನ್ನು ಕಾವಿನಲ್ಲಿ ಕಾಣಬಹುದು. ಸಹ್ಯಪರ್ವತ ಪ್ರದೇಶದಲ್ಲಿ ಕಂಡುಬರುವ ಅಮೂಲ್ಯ ಆಯುರ್ವೇದ ಮೂಲಿಕೆ ಕಾವಿನಲ್ಲಿ ಸಮೃದ್ಧವಾಗಿವೆ.


ಜೀವವೈವಿಧ್ಯ ನಿರ್ವಹಣಾ ಸಮಿತಿಯು ಅಧಿಕೃತವಾಗಿ ಜೀವವೈವಿಧ್ಯ ಪಾರಂಪರಿಕ ಪ್ರದೇಶಗಳ ಆಯ್ಕೆಯ ಜವಾಬ್ದಾರಿಯನ್ನು ಹೊಂದಿದೆ. ಜೀವವೈವಿಧ್ಯ ಪ್ರಾಮುಖ್ಯತೆಯ ಪ್ರದೇಶವನ್ನು ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸಲು ಹಲವಾರು ಅಡಚಣೆಗಳನ್ನು ದಾಟಬೇಕಾಗುತ್ತದೆ.

ಸಮುದಾಯದ ಮೂಲಕ ರಕ್ಷಣೆ..

        ವಲಿಯಪರಂಬ ಗ್ರಾಮ ಪಂಚಾಯತಿ ಇಡಯಿಲ ಕಾವ್ ಅನ್ನು ಜೀವ ವೈವಿಧ್ಯತೆಯ ಪಾರಂಪರಿಕ ಪ್ರದೇಶವಾಗಿ ಉನ್ನತೀಕರಿಸಲು ಕ್ರಮಗಳನ್ನು ಕೈಗೊಳ್ಳಲು ಸಕಾರಾತ್ಮಕ ಮಧ್ಯಸ್ಥಿಕೆಗಳನ್ನು ಮಾಡಿದೆ. ಜನಸಭಾ ಸಭೆ ನಡೆಸಿ, ಜೀವವೈವಿಧ್ಯ ಪರಂಪರೆ ಕೇಂದ್ರವಾಗುವುದರ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜನಪ್ರತಿನಿಧಿಗಳು, ಸ್ಥಳೀಯ ಗ್ರಂಥಾಲಯ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಕವ್ವಾಯಯಿಯ  ಜೀವವೈವಿಧ್ಯವನ್ನು ಹೊರ ಜಗತ್ತಿಗೆ ತಲುಪಿಸಲು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries