ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ. ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, 2022- 23ನೇ ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ಶಾಲೆಯ ವಿವಿಧ ಯೋಜನೆಗಳಾದ ಬೆಳಿಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ, ಕಂಪ್ಯೂಟರ್ ವ್ಯವಸ್ಥೆ, ವಾಹನದ ವ್ಯವಸ್ಥೆಯ ಆಯವ್ಯಯ ಮಂಡಿಸಲಾಯಿತು. ಶಾಲಾ ಚಟುವಟಿಕೆಯ ವಿವಿಧ ಯೋಜನೆಗಳಾದ ಬಾಲೋದ್ಯಾನ, ರೇಡಿಯೋ ಕೇಂದ್ರ, ಸಂಚಯಿಕ ವ್ಯವಸ್ಥೆ, ಲೈಬ್ರರಿ ವ್ಯವಸ್ಥೆ, ಆಚರಣೆಗಳು, ಕೃಷಿ ಮೊದಲಾದ ವ್ಯವಸ್ಥೆಗಳ ಕುರಿತು ಜವಾಬ್ದಾರಿಯ ಶಿಕ್ಷಕರು ಮಾಹಿತಿ ನೀಡಿದರು.
ಪ್ರಸ್ತುತ ವರ್ಷದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಮಾತೃ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ತೆರವುಗೊಂಡ ಸ್ಥಾನಕ್ಕೆ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಾಲಾ ವ್ಯವಸ್ಥಾಪಕರ ಸಹೋದರ ಪ್ರಸನ್ನ ವಿ.ಎಸ್. ಕೊಡುಗೆಯಾಗಿ ನೀಡಿದ ಸಮವಸ್ತ್ರವನ್ನು ಒಂದನೇ ತರಗತಿ ಹಾಗೂ ಉಳಿದ ತರಗತಿಗಳಲ್ಲಿ ಹೊಸದಾಗಿ ದಾಖಲಾತಿ ಪಡೆದ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು.
ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ವಾರ್ಡ್ ಸದಸ್ಯ ರಾಮಚಂದ್ರ ಮೊಳಕ್ಕಾಲು, ಮಾತೃ ಸಂಘದ ಅಧ್ಯಕ್ಷೆ ದಿವ್ಯ ಶಿರಂತಡ್ಕ ಉಪಸ್ಥಿತರಿದ್ದರು.ಶಿಕ್ಷಕ ಶ್ರೀಹರಿ ಶಂಕರ ಶರ್ಮ ಪ್ರಾರ್ಥಿಸಿದರು.ಶಿಕ್ಷಕ ವೆಂಕಟ ವಿದ್ಯಾಸಾಗರ ಇವರು ವಂದಿಸಿದರು.ಹಿರಿಯ ಶಿಕ್ಷಕ ಸಚ್ಚಿದಾನಂದ ಎಸ್. ನಿರೂಪಿಸಿದರು.