ನವದೆಹಲಿ: 'ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ತಮ್ಮ ರಾಷ್ಟ್ರಗಳಲ್ಲಿ ಆರಂಭಿಸುವಂತೆ ಜಗತ್ತಿನ ವಿವಿಧ ದೇಶಗಳು ಕೋರುತ್ತಿವೆ. ಆ ಮೂಲಕ ಹೊಸ ಸಾಧ್ಯತೆಗಳ ಬಯಸಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ನವದೆಹಲಿ: 'ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ತಮ್ಮ ರಾಷ್ಟ್ರಗಳಲ್ಲಿ ಆರಂಭಿಸುವಂತೆ ಜಗತ್ತಿನ ವಿವಿಧ ದೇಶಗಳು ಕೋರುತ್ತಿವೆ. ಆ ಮೂಲಕ ಹೊಸ ಸಾಧ್ಯತೆಗಳ ಬಯಸಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
'ಅಖಿಲ ಭಾರತೀಯ ಶಿಕ್ಷಾ ಸಮಾಗಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಕ್ಯಾಂಪಸ್‌ಗಳನ್ನು ವಿದೇಶಗಳಲ್ಲಿ ಆರಂಭಿಸುವಂತೆ ಹಲವು ದೇಶಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸುತ್ತಿವೆ.
ರಾಷ್ಟ್ರೀಯ ಶಿಕ್ಷಣ ನೀತಿ( ಎನ್‌ಇಪಿ) ಪ್ರಾರಂಭವಾಗಿ ಇಂದಿಗೆ ಮೂರು ವರ್ಷಗಳು ಕಳೆದಿದೆ. 'ಯುವಜನತೆ ಅವರ ಪ್ರತಿಭೆಗಿಂತ ಅವರ ಭಾಷೆಯ ಆಧಾರದ ಮೇಲೆ ನಿರ್ಣಯಿಸುವುದು ದೊಡ್ಡ ಅನ್ಯಾಯವಾಗಿದೆ. ಎನ್‌ಇಪಿಯು ಭಾರತವನ್ನು ಸಂಶೋಧನೆ ಮತ್ತು ನಾವೀನ್ಯತೆಗಳ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ' ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಹಾಗೂ ಭವಿಷ್ಯದ ತಂತ್ರಜ್ಞಾನಕ್ಕೆ ಸಮಾನವಾದ ಪ್ರಾಮುಖ್ಯತೆಯನ್ನು ನೀಡಿದೆ. ವಿಪತ್ತು ನಿರ್ವಹಣೆ, ಹವಾಮಾನ ಬದಲಾವಣೆ ಮತ್ತು ಇಂಧನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತೆ ಮೋದಿ ಶಿಕ್ಷಕರಿಗೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಿಎಂ ಶ್ರೀ ಯೋಜನೆಯಡಿ ಮೊದಲ ಕಂತಿನ ಹಣ ಹಾಗೂ12 ಭಾರತೀಯ ಭಾಷೆಗಳಿಗೆ ಭಾಷಾಂತರಿಸಿದ 'ಕೌಶಲ್ಯ ಆಧಾರಿತ 'ಪಠ್ಯಕ್ರಮದ ಪುಸ್ತಕಗಳನ್ನೂ ಪ್ರಧಾನಿ ಬಿಡುಗಡೆ ಮಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಇಂದಿಗೆ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಇದರ ಅಂಗವಾಗಿ ದೆಹಲಿಯ ಹಳೆ ಮೈದಾನದ ಭಾರತ ಮಂಟಪದಲ್ಲಿ ಎರಡು ದಿನಗಳ' ಅಖಿಲ ಭಾರತೀಯ ಶಿಕ್ಷಾ ಸಮಾಗಮ' ಕಾರ್ಯಕ್ರಮ ನಡೆಯುತ್ತಿದೆ.