ಕೊಚ್ಚಿ: ಕೇಂದ್ರ ಸಚಿವ ರಾಮದಾಸ್ ಅಠವಲೆ ಅವರು ಎರ್ನಾಕುಳಂ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ಎನ್.ಎಸ್.ಕೆ. ಉಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದರು.
ಜಿಲ್ಲೆಯ ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ಸಮುದಾಯಗಳ ಕಲ್ಯಾಣ ಯೋಜನೆಗಳು, ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ದೌರ್ಜನ್ಯ ಕಾಯ್ದೆ ಅನುμÁ್ಠನ, ವೃದ್ಧಾಶ್ರಮಗಳ ಕಾರ್ಯನಿರ್ವಹಣೆ, ವೃದ್ಧಾಪ್ಯ ವೇತನ, ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಆರ್ಥಿಕ ನೆರವು ಮತ್ತು ವಿಕಲಚೇತನರ ಉನ್ನತಿಗೆ ಯೋಜನೆಗಳ ಕುರಿತು ಚರ್ಚಿಸಲಾಯಿತು. ಕೊಚ್ಚಿ ಉಪ ಪೆÇಲೀಸ್ ಆಯುಕ್ತ ಎಸ್.ಶಶಿಧರನ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ (ಪ್ರಭಾರ) ಎಂ.ವಿ. ಸ್ಮಿತಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಚೇರಿ, ಹಿಂದುಳಿದ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು.