ಕಾಸರಗೋಡು: ಜಿಲ್ಲೆಯಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ವಿಸ್ತರಿಸಿ, ಸ್ಥಳೀಯ ಭಾಷೆ ಮತ್ತು ಸಂಸ್ಕøತಿ ಅಧ್ಯಯನ, ಭಾಷಾಂತರಕ್ಕೆ ಉತ್ತೇಜನ ನೀಡಲು ಅಗತ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕಣ್ಣೂರು ವಿಶ್ವ ವಿದ್ಯಾಲಯದ ಸಹಾಯಕ ಉಪಕುಲಪತಿ ಪೆÇ್ರ.ಎ.ಸಾಬು ತಿಳಿಸಿದ್ದಾರೆ.
ಅವರು ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಶಿಕ್ಷಣ ಕೇಂದ್ರ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗ ವತಿಯಿಂದ ಕಣ್ಣೂರು ವಿವಿಯ ಕಾಸರಗೋಡು ಚಾಲ ಕ್ಯಾಂಪಸ್‍ನಲ್ಲಿ 'ಕಾಸರಗೋಡು ಒಂದು ಭಾಷಾ ವಲಯ' ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಸಮರೋಪಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಿಂಡಿಕೇಟ್ ಸದಸ್ಯ ಪೆÇ್ರ.ಎಂ.ಸಿ.ರಾಜು ಅಧ್ಯಕ್ಷ ತೆ ವಹಿಸಿದ್ದರು. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ಮತ್ತು ತುಲನಾತ್ಮಕ ಸಾಹಿತ್ಯ ಶಾಲೆಯ ಡೀನ್ ಡಾ.ವಿ.ರಾಜೀವ್ ಮುಖ್ಯ ಅತಿಥಿಯಾಗಿದ್ದರು. ಡಾ.ಎ.ಎಂ.ಶ್ರೀಧರನ್ ಮತ್ತು ಡಾ.ರಿಜುಮೋಲ್ ಉಪಸ್ಥಿತರಿದ್ದರು. ಈ ಸಂದರ್ಭ ನಡೆದ ವಿವಿಧ ಸೆಷನ್‍ಗಳಲ್ಲಿ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ಬಾಲಕೃಷ್ಣ ಹೊಸಂಗಡಿ, ರವೀಂದ್ರನ್ ಪಾಡಿ, ಡಾ.ರತ್ನಾಕರಮಲ್ಲಮೂಲ, ಡಾ.ಕೆ.ವಿ.ಸಜೀವನ್, ಡಾ.ವಿ.ಬಾಲಕೃಷ್ಣನ್, ಸುಂದರ ಬಾರಡ್ಕ, ಕೆ. ಮುಹಮ್ಮದಲಿ, ಡಾ.ಸಿ.ಕೆ.ಆಶಾಲತ, ಡಾ.ಬಿ.ಸವಿತಾ ವಿಷಯ ಮಂಡಿಸಿದರು. ಡಾ.ಎಂ.ವಿ. ನಾರಾಯಣನ್ ಪೆರಿಯ, ಬಾಲಕೃಷ್ಣನ್ ಚೆರ್ಕಳ ಮತ್ತು ರಾಧಾಕೃಷ್ಣನ್ ಪೆರುಂಬಳ ಮೋಡರೇಟರ್ ಆಗಿ ಸಹಕರಿಸಿದರು.