ಕಾಸರಗೋಡು: ಪೈವಳಿಕೆ ಚೇರಾಲ್ ನಿವಾಸಿ, ಕೇರಳ ರಾಜ್ಯ ಆಡಿಟ್ ಇಲಾಖೆ ನೌಕರ ಯಾದವ ಕುಮಾರ್(55)ಅಸೌಖ್ಯದಿಂದ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಈ ಹಿಂದೆ ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದು, ಆರ್.ಎಸ್.ಎಸ್ ಸ್ವಯಂ ಸೇವಕರಾಗಿದ್ದರು. ಗ್ರಾಮ ಪಂಚಾಯತಿ ಸದಸ್ಯರೂ ಆಗಿದ್ದರು. ಬಳಿಕ ಉದ್ಯೋಗ ನಿಮಿತ್ತ ರಾಜಕೀಯ ವಲಯದಿಂದ ದೂರವಾಗಿದ್ದರು. ಇವರು ದಿ. ಐತ್ತಪ್ಪ ನಾಯ್ಕ-ದಿ. ಗೌರಿ ದಂಪತಿ ಪುತ್ರ.