ಬದಿಯಡ್ಕ: ನೆಲ್ಲಿಕಟ್ಟೆ ಪಿ.ಬಿ.ಎಂ. ಆಂಗ್ಲ ಮಾಧ್ಯಮ ಹೈಯರ್ ಸೆಕೆಂಡರಿ ಸ್ಕೂಲ್ ಟೈಕೊಂಡೊ ಯೆಲ್ಲೋ ಬೆಲ್ಟ್ ಪರೀಕ್ಷೆಗೆ ಹಾಜರಾಗಿ ವಿಶ್ವ ಟೈಕೊಂಡೊ ಸರ್ಟಿಫಿಕೇಟ್ ಆಫ್ ರೆಕಗ್ನಿಶನ್ ಪಡೆದ 92 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಂತರಾಷ್ಟ್ರೀಯ ಮಾಸ್ಟರ್ ಡಾ. ಅನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ನಿಜಾಮ್ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ನಿರ್ವಾಹಕ ಎಂ.ಎ. ಮಕರ ಮಾಸ್ತರ್ ಉದ್ಘಾಟಿಸಿದರು. ಸಿಬ್ಬಂದಿ ಕಾರ್ಯದರ್ಶಿ ಜಯರಾಜ್, ಶೈಕ್ಷಣಿಕ ಸಂಯೋಜಕ ರಮಾ, ಸಹಾಯಕ ತರಬೇತುದಾರ ಸಿದ್ದಿಕ್ ಉಪಸ್ಥಿತರಿದ್ದರು.