HEALTH TIPS

ತುಲಾಭಾರಕ್ಕೆ ಟೊಮ್ಯಾಟೋ ಬಳಕೆ!; ಮಗಳಿಗಾಗಿ ವಿನೂತನ ಪೂಜೆ..

Top Post Ad

Click to join Samarasasudhi Official Whatsapp Group

Qries

             ಆಂಧ್ರಪ್ರದೇಶ: ಟೊಮ್ಯಾಟೋ ಬೆಲೆ ನಿತ್ಯವೂ ಗಗನಕ್ಕೇರುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ರೂ.300ರ ಗಡಿ ದಾಟಿದೆ. ಇದರಿಂದ ಜನಸಾಮಾನ್ಯರು ಟೊಮ್ಯಾಟೋ ಖರೀದಿಸಿ ತಿನ್ನಲು ಸಾಧ್ಯವಾಗದೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ.

               ಆದರೆ ಇಲ್ಲೊಬ್ಬರು ಟೊಮ್ಯಾಟೋ ಬಳಸಿ ದೇವರಿಗೆ ಹರಕೆ ತೀರಿಸಿದ್ದಾರೆ.

            ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮ್ಯಾಟೋ ತುಲಾಭಾರ ಸೇವೆ ಏರ್ಪಡಿಸಲಾಗಿತ್ತು. ನೂಕಾಲಮ್ಮ ದೇವಸ್ಥಾನದಲ್ಲಿ ತುಲಾಭಾರ ಕಾರ್ಯಕ್ರಮ ನಡೆಯಿತು.

            ಮೊದಲು ಅವರು 51 ಕೆಜಿ ಟೊಮ್ಯಾಟೋಗಳನ್ನು ತೂಗುತ್ತಿದ್ದರು. ನಂತರ ಬೆಲ್ಲ ಮತ್ತು ಸಕ್ಕರೆಯನ್ಮು ತುಲಾಭಾರಕ್ಕೆ ಬಳಸಲಾಗಿದೆ. ತುಲಾಭಾರಕ್ಕೆ ನೀಡುವ ಬರುವ ಟೊಮ್ಯಾಟೋ, ಬೆಲ್ಲ, ಸಕ್ಕರೆಯನ್ನು ದೇವಿಯ ನಿತ್ಯಾನ್ನದಾನಕ್ಕೆ ಬಳಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕೆಜಿಗೆ 120 ರೂ. ಇದರಿಂದ ದರ್ಶನಕ್ಕೆ ಬಂದ ಭಕ್ತರು ತುಲಾಭಾರ ನೆರವೇರಿಸುತ್ತಿರುವುದನ್ನು ಕಣ್ತುಂಬಿಕೊಂಡಿದ್ದಾರೆ.

                 ತುಲಾಭಾರ ಎಂದರೇನು?: ತುಲಾ ಭಾರ ಸೇವೆಯನ್ನು ನಾನಾ ದ್ರವ್ಯಗಳಲ್ಲಿ ಮಾಡಲಾಗುತ್ತದೆ. ತುಲಾ ಭಾರ ಮಾಡಿಕೊಳ್ಳುವ ವ್ಯಕ್ತಿಯ ತೂಕದಷ್ಟು ವಸ್ತುವನ್ನು ಆಯಾ ದೇವಸ್ಥಾನಕ್ಕೆ ಅರ್ಪಣೆ ಮಾಡಲಾಗುತ್ತದೆ.ಇದಕ್ಕೆ ಶಾಸ್ತ್ರಾಧಾರಗಳೇನೂ ಇಲ್ಲ. ಸೇವೆಗಳಲ್ಲಿ ತುಲಾಭಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಹಾಭಾರತದಲ್ಲಿ ಅಂಥದ್ದೊಂದು ಸನ್ನಿವೇಶ ಬರುತ್ತದೆ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಕೃಷ್ಣನ ತುಲಾಭಾರ ಮಾಡಲಾಗುತ್ತದೆ. ಸತ್ಯಭಾಮೆಗೆ ತನ್ನ ಸಂಪತ್ತಿನಿಂದ ಕೃಷ್ಣನ ತೂಕದಷ್ಟನ್ನು ಅಳೆದು, ಗೆಲ್ಲುವಾಸೆ. ಆದರೆ ರುಕ್ಮಿಣಿಗೆ ತನ್ನ ಅನನ್ಯ ಪ್ರೀತಿಯಿಂದ ಒಲಿಸಿಕೊಳ್ಳುವಾಸೆ. ಕೊನೆಗೆ ಕೃಷ್ಣನನ್ನು ತೂಗುವುದು ರುಕ್ಮಿಣಿಯ ತುಳಸೀದಳವೇ. ಅಂದರೆ, ಪ್ರೀತಿಗೆ- ಭಕ್ತಿಗೆ ಆ ದೇವರನ್ನು ಒಲಿಸಿಕೊಳ್ಳುವ ಶಕ್ತಿಯಿದೆ ಎಂಬ ಸಂದೇಶವನ್ನು ಆ ಭಗವಂತ ನೀಡಿದ್ದಾನೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries