HEALTH TIPS

ಔಷಧ ತೆಗೆದುಕೊಳ್ಳದಿದ್ದರೂ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವುದು ಹೇಗೆ?

 ಮಧುಮೇಹ ಬಂದರೆ ಅದನ್ನು ನಿಯಂತ್ರಣದಲ್ಲಿ ಇಡಬಹುದೇ ಹೊರತು ಮಧುಮೇಹವನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ನೀವು ಮನಸ್ಸು ಮಾಡಿದರೆ ಮಧುಮೇಹವನ್ನು ರಿವರ್ಸ್ ಮಾಡಬಹುದು, ಆವಾಗ ಯಾವ ಇನ್ಸುಲಿನ್, ಮಾತ್ರೆಯ ಅಗ್ಯತವಿರಲ್ಲ.

ನಾವಿಲ್ಲಿ ಔಷಧವಿಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡ ಬಯಸುವವರು ಜೀವನಶೈಲಿಯಲ್ಲಿ ಈ 5 ಬದಲಾವಣೆ ಮಾಡಿದರೆ ಔಷಧ ತೆಗೆದುಕೊಳ್ಳದಿದ್ದರೂ ನಿಮ್ಮ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ:
ಆರೋಗ್ಯಕರ ಆಹಾರಕ್ರಮ
ಮಧುಮೇಹ ಬಂದವರು ಮೊದಲು ಆಹಾರಕ್ರಮ ಬದಲಾಯಿಸಬೇಕು. ಕೆಲವರು ಆಹಾರಕ್ರಮ ಬದಲಾಯಿಸಬೇಕೆಂದು ಹೇಳಿದಾಗ ಇನ್ಮುಂದೆ ರುಚಿಕರವಾದ ಆಹಾರ ತಿನ್ನುವಂತಿಲ್ಲ ಎಂದೇ ಭಾವಿಸುತ್ತಾರೆ, ಖಂಡಿತವಲ್ಲ, ನೀವು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಬೇಕು, ಅಂದರೆ ನಿಮ್ಮ ಆಹಾರದಲ್ಲಿ ರಕ್ತದಲ್ಲಿ ಬೇಗನೆ ಸಕ್ಕರೆಯಂಶ ಹೆಚ್ಚಿಸುವ ಆಹಾರಗಳಿರಬಾರದು. ನೀವು ನಿಮ್ಮ ಆಹಾರದಲ್ಲಿ ನಾರಿನಂಶ ಅಧಿಕವಿರುವ ಆಹಾರ ಸೇವಿಸಬೇಕು, ತರಕಾರಿ ಹೆಚ್ಚಾಗಿ ಬಳಸಿ, ಲೋ ಗ್ಲೈಸೆಮಿಕ್‌ ಇಂಡೆಕ್ಸ್ ಆಹಾರ ಬಳಸಿ. ಅಲ್ಲದೆ ಮಿತಿಯಲ್ಲಿ ಆಹಾರ ಸೇವಿಸಿ.

ದಿನಾ ವ್ಯಾಯಾಮ ಮಾಡಿ
ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ದಿನಾ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ಇನ್ಸುಲಿನ್ ಉತ್ಪತ್ತಿಗೆ ಸಹಕಾರಿಯಾಗಿದೆ. ವಾರದಲ್ಲಿ 150 ನಿಮಿಷ ಅಂದರೆ ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಲೇಬೇಕು. ವ್ಯಾಯಾಮ ಮಾಡುವುದರಿಂದ ಮಧುಮೇಹ ನಿಯಂತ್ರಣದಲ್ಲಿಡುವುದು ಮಾತ್ರವಲ್ಲ ಮೈ ತೂಕ ನಿಯಂತ್ರಿಸಲು ಸಹಕಾರಿಯಾಗಿದೆ.

ಆರೋಗ್ಯಕರ ಮೈ ತೂಕ ಹೊಂದಬೇಕು
ನಿಮ್ಮ ಮೈ ತೂಕ ಅಧಿಕವಿದ್ದರೆ ಸ್ವಲ್ಪ ಮೈ ತೂಕ ಕಡಿಮೆಯಾದರೂ ತುಂಬಾನೇ ಒಳ್ಳೆಯದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಆಹಾರಕ್ರಮ ಹಾಗೂ ವ್ಯಾಯಾಮ ಮೈ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಮಾನಸಿಕ ಒತ್ತಡ ನಿಯಂತ್ರಣದಲ್ಲಿಡಲು ಸಹಕಾರಿ
ಮಾನಸಿಕ ಒತ್ತಡ ನಿಯಂತ್ರಿಸಬೇಕು. ಮಾನಸಿಕ ಒತ್ತಡ ಹೆಚ್ಚಾದರೆ ಮಧುಮೇಹ ಮಾತ್ರವಲ್ಲ ಅನೇಕ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಮಾನಸಿಕ ಒತ್ತಡ ನಿಯಂತ್ರಿಸಬೇಕು, ಚೆನ್ನಾಗಿ ನಿದ್ದೆ ಮಾಡಿ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿ. ಧ್ಯಾನ, ಯೋಗ ಮಾನಸಿಕ ಒತ್ತಡ ನಿಯಂತ್ರಿಸಲು ಸಹಕಾರಿ.

* ಚೆನ್ನಾಗಿ ನೀರು ಕುಡಿಯಬೇಕು
ನೀವು ಸಾಕಷ್ಟು ನೀರು ಕುಡಿಯಬೇಕು, ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಇದರಿಂದ ಕಿಡ್ನಿ ಚೆನ್ನಾಗಿ ಕಾರ್ಯನಿರ್ವಹಿಸಲು ಹಾಗೂ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿ.

ಸಕ್ಕರೆಯಂಶ ಎಷ್ಟಿದೆಯೆಂದು ತಿಳಿಯಲು ನಿಯಮಿತವಾಗಿ ಚೆಕಪ್ ಮಾಡಿ
ನೀವು ನಿಮ್ಮ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲ ನೀವು ನಿಯಮಿತವಾಗಿ ಚೆಕಪ್ ಕೂಡ ಮಾಡಬೇಕು, ಇದರಿಂದ ಸ್ವಲ್ಪ ವ್ಯತ್ಯಾಸ ಉಂಟಾದರೆ ಗೊತ್ತಾಗುವುದು.
ಸೂಚನೆ: ನೀವು ಔಷಧ ತೆಗೆದುಕೊಳ್ಳುತ್ತಿದ್ದರೆ ಸಡನ್ ಬಿಡಬೇಡಿ, ಮೊದಲಿಗೆ ನಿಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಬಂದ ಮೇಲೆ ನಂತರ ಈ ಟಿಪ್ಸ್ ಪಾಲಿಸಿ, ಅದರ ಮೊದಲು ನೀವು ವೈದ್ಯರ ಸಲಹೆ ಪಡೆಯಿರಿ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries