HEALTH TIPS

'ರಾಮಾಯಣ ಪಾರಾಯಣಕ್ಕೆ ಅವಕಾಶ ನೀಡದೆ ದೇಗುಲ ನಡೆಯಲ್ಲಿ ಕೊಂದು ನೇತುಹಾಕಲಾಗುವುದು’: ಮುಸ್ಲಿಂ ಲೀಗ್ ನಿಂದ ಹಿಂದೂ ಧರ್ಮೀಯರ ವಿರುದ್ಧ ಭೀಭತ್ಸ ಘೋಷಣೆ: ಕಾಸರಗೋಡಲ್ಲಿ ವೈಷಮ್ಯಕ್ಕೆ ಬೀಜ

             ಕಾಸರಗೋಡು: ಮಣಿಪುರ ಗಲಭೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೇರಳದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಉದ್ದೇಶದಿಂದ ಕೆಲವು ಗುಪ್ತ ಪಡೆಗಳು ಕೆಲಸ ಮಾಡುತ್ತಿರುವ ಅನುಮಾನ ಬಲಗೊಂಡಿದೆ. 

            ಆರೆಸ್ಸೆಸ್ ವಿರುದ್ಧ ಭಾವನೆಗಳನ್ನು ಕೆರಳಿಸಲು ಮತ್ತು ಹಿಂದೂಗಳು ಮತ್ತು ಕ್ರಿಶ್ಚಿಯನ್ನರಲ್ಲಿ ಗೊಂದಲ ಮೂಡಿಸಲು ಬಿಜೆಪಿಯ ಮಣಿಪುರ ರಾಜ್ಯ ಉಪಾಧ್ಯಕ್ಷ ಚಿದಾನಂದ ಸಿಂಗ್ ಮತ್ತು ಅವರ ಪುತ್ರನ ಪೋಟೋವನ್ನು ಆರೋಪಿ ಎಂದು ಕೇರಳದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಸಿಪಿಎಂ ಪಿಬಿ ಸದಸ್ಯೆ ಸುಭಾಷಿಣಿ ಅಲಿ ಮುಂದೆ ಬಂದು ಕ್ಷಮೆಯಾಚಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸಿದೆ. 

           ಆದರೆ, ಇಸ್ಲಾಂವಾದಿಗಳು ಮತ್ತು ಕಮ್ಯುನಿಸ್ಟರು ಕೇರಳದ ಮಣಿಪುರ ಗಲಭೆಯ ನೆಪದಲ್ಲಿ ಪ್ರತಿಭಟನೆ ಮತ್ತು ಸುಳ್ಳು ಪ್ರಚಾರ ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಕೇರಳದ ವಿವಿಧೆಡೆ ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ಧರಣಿ ನಡೆಸುತ್ತಿದ್ದಾರೆ. ಅದರಂತೆ ಮಣಿಪುರ ಗಲಭೆಗೆ ಸಂಬಂಧಿಸಿದಂತೆ ಕಾಸರಗೋಡು ಕಾಞಂಗಾಡ್ ಮುಸ್ಲಿಂ ಲೀಗ್ ನಡೆಸಿದ ಪ್ರದರ್ಶನ ಹಾಗೂ ಅದರಲ್ಲಿ ಮೊಳಗಿದ ಘೋಷಣೆಗಳು ಜನರಲ್ಲಿ ಭಯ ಮೂಡಿಸಿದೆ. ಪಾಪ್ಯುಲರ್ ಫ್ರಂಟ್ ನಂತರ, ಹಿಂದೂಗಳಿಗೆ ಬೆದರಿಕೆಯ ಘೋಷಣೆಗಳನ್ನು ಲೀಗ್ ಮಾಡಿ ಗೊಂದಲಕ್ಕೆ ಕಾರಣವಾಗಿದೆ. 

            ‘ರಾಮಾಯಣ ಪಾರಾಯಣಕ್ಕೆ ಅವಕಾಶ ನೀಡದೆ ದೇವರ ನಡೆಯಲ್ಲಿ ನೇಣಿಗೇರಿಸಿ ಸುಡಲಾಗುವುದು’ ಎಂದು ಮುಸ್ಲಿಂ ಲೀಗ್ ಪ್ರತಿಭಟನೆಯ ಪ್ರಮುಖ ಘೋಷಣೆಯಾಗಿತ್ತು. ಮಣಿಪುರ ಗಲಭೆಯ ಮೂಲ ಮರೆಮಾಚಿ ಮುಸ್ಲಿಂ ಲೀಗ್ ಹಿಂದೂಗಳ ವಿರುದ್ಧ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದೆ. ಪಾಪ್ಯುಲರ್ ಫ್ರಂಟ್ ಅನ್ನು ನಿಷೇಧಿಸಿದ ಬಳಿಕ ಅದರ ಉಗ್ರ ಮನೋಸ್ಥಿತಿಗಳು ಮುಸ್ಲಿಂ ಲೀಗ್ ನೊಳಗೆ ನುಸುಳಿ, ಆಶ್ರಯ ತಾಣವಾಗಿಸಿ ಹಿಂದೂ ಧರ್ಮೀಯರನ್ನು ಕೊಲ್ಲುವ ಘೋಷಣೆಯನ್ನು ಎತ್ತಿ ಕಾಸರಗೋಡಿನಲ್ಲಿ ಕೋಮು ವೈಷಮ್ಯಕ್ಕೆ ಮುಂದಾಗಿದೆ. ವಿಶೇಷವೆಂದರೆ ಇದೆಲ್ಲವನ್ನೂ ಗಮನಿಸಿ ಪೋಲೀಸ್ ಇಲಾಖೆ ಮೌನವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries