ಎರ್ನಾಕುಳಂ: ಕೊಚ್ಚಿಯನ್ನು ಕೇರಳದ ರಾಜಧಾನಿಯನ್ನಾಗಿ ಮಾಡಬೇಕೆಂಬ ಸಂಸದ ಹೈಬಿ ಈಡನ್ ಮಂಡಿಸಿದ ಖಾಸಗಿ ಮಸೂದೆ ಕಾಂಗ್ರೆಸ್ ನಾಯಕತ್ವವನ್ನು ಇಕ್ಕಟ್ಟಿಗೀಡುಮಾಡಿದೆ.
ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದಂತೆ ಹೈಬಿಗೆ ನಾಯಕತ್ವ ಸೂಚನೆ ನೀಡಿದೆ. ಜೊತೆಗೆÀ, ಅನುಮತಿಯಿಲ್ಲದೆ ಖಾಸಗಿ ಮಸೂದೆಯನ್ನು ಮಂಡಿಸದಂತೆ ಕಾಂಗ್ರೆಸ್ ಕೇಂದ್ರ ನಾಯಕತ್ವವು ಪಕ್ಷದ ಸಂಸದರಿಗೆ ಸೂಚನೆ ನೀಡಿತು.
ಕೊಚ್ಚಿ ಸಂಸದ ಹೈಬಿ ಈಡನ್ ಅವರು ಮಾರ್ಚ್ ತಿಂಗಳಲ್ಲಿ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಕೇರಳ ರಾಜ್ಯದ ರಾಜಧಾನಿಯನ್ನು ತಿರುವನಂತಪುರಂನಿಂದ ಕೊಚ್ಚಿಗೆ ಸ್ಥಳಾಂತರಿಸಬೇಕೆಂಬುದು ಬೇಡಿಕೆಯಾಗಿತ್ತು. ನಂತರ, ಕೇಂದ್ರ ಗೃಹ ಸಚಿವಾಲಯವು ಈ ವಿಷಯದ ಬಗ್ಗೆ ರಾಜ್ಯದ ನಿಲುವನ್ನು ಕೇಳಿದೆ. ಆದರೆ ವಿಧೇಯಕದಲ್ಲಿನ ಪ್ರಸ್ತಾವನೆ ಅಪ್ರಾಯೋಗಿಕ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಿದೆ.
ಆದರೆ ಈ ವಿಷಯ ವಿವಾದಕ್ಕೆ ತಿರುಗಿತ್ತು. ಹೈಬಿ ತಮ್ಮದೇ ಪಕ್ಷದಿಂದಲೇ ಭಾರೀ ವಿರೋಧ ಎದುರಿಸಿದರು. ಸಂಸದ ಕೆ.ಮುರಳೀಧರನ್, ಸಂಸದ ಶಶಿ ತರೂರ್ ಮತ್ತು ಸಂಸದ ಅಡೂರ್ ಪ್ರಕಾಶ್ ಹೈಬಿಯನ್ನು ಟೀಕಿಸಿರುವರು.