ತಿರುವನಂತಪುರಂ: ಲಂಚ ಪಡೆಯುತ್ತಿದ್ದ ಕೆಎಸ್‍ಆರ್‍ಟಿಸಿ ಡೆಪ್ಯುಟಿ ಜನರಲ್ ಮ್ಯಾನೇಜರ್ ರನ್ನು ಬಂಧಿಸಲಾಗಿದೆ. ಜಾಹೀರಾತು ಬಿಲ್ ಬದಲಾಯಿಸಲು ಲಂಚ ಪಡೆಯುತ್ತಿದ್ದ ಉಪ ಪ್ರಧಾನ ವ್ಯವಸ್ಥಾಪಕ ಪಿ. ಉದಯಕುಮಾರ್ ಬಂಧಿತ ಅಧಿಕಾರಿಯಾಗಿದ್ದಾರೆ.
ಬಸ್ ನಲ್ಲಿ ಜಾಹೀರಾತು ಹಾಕಿದ್ದಕ್ಕೆ 6.58 ಲಕ್ಷ ಬಿಲ್ ಬದಲಾಯಿಸಲು ಉದಯಕುಮಾರ್ 1 ಲಕ್ಷ ರೂ. ಲಂಚ ಕೇಳಿದ್ದರು. ನಂತರ ತಿರುವನಂತಪುರಂನಲ್ಲಿರುವ ಖಾಸಗಿ ಕ್ಲಬ್‍ನಲ್ಲಿ 30,000 ರೂ.ಗಳನ್ನು ಪಡೆಯುತ್ತಿದ್ದಾಗ ಬಂಧಿಸಲಾಯಿತು.
ಈ ಹಿಂದೆ ಗುತ್ತಿಗೆದಾರ ಉದಯಕುಮಾರ್ ಅವರಿಗೆ 60 ಸಾವಿರ ರೂ. ನೀಡಿದ್ದರು. ಉಳಿದ ಮೊತ್ತ ನೀಡುವಂತೆ ಒತ್ತಾಯಿಸಿದ್ದರಿಂದ ಗುತ್ತಿಗೆದಾರರು ಜಾಗೃತ ದಳಕ್ಕೆ ಮಾಹಿತಿ ನೀಡಿದ್ದರು.