ಇಂಫಾಲ್ : ಮಣಿಪುರದ ವಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ವಯಸ್ಸಿನ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್ : ಮಣಿಪುರದ ವಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ವಯಸ್ಸಿನ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಫೌಬಾಕ್ಚಾವೊ ಗ್ರಾಮದಲ್ಲಿ ಅಪರಿಚಿತ ಬಂಧೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದರು. ಈ ವೇಳೆ ಗುಂಡು ತಗುಲಿದೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಅದರಲ್ಲೂ ಬಹುತೇಕ ಮಹಿಳೆಯರು ಮೋಯಿರಾಂಗ್ ಪಟ್ಟಣದಲ್ಲಿ ರಸ್ತೆಗಿಳಿದು ಪ್ರತಿಭಟಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುರಾಚಾಂದ್‌ಪುರ ಜಿಲ್ಲೆಯ ಅವಾಂಗ್ ಲೇಕಿ ಮತ್ತು ಕಂಗ್ವಾಯಿ ಗ್ರಾಮಗಳಲ್ಲಿ ಎರಡು ಗುಂಪುಗಳ ನಡುವೆ ಗುರುವಾರ ಮಧ್ಯರಾತ್ರಿ ಸುಮಾರು 1.30 ಗಂಟೆಗೆ ಗುಂಡಿನ ಚಕಮಕಿ ನಡೆದದ್ದು ಮೊದಲು ವರದಿಯಾಯಿತು. ಈ ಗ್ರಾಮಗಳು ಫೌಬಾಕ್ಚಾವೊ ಗ್ರಾಮಕ್ಕೆ ಹತ್ತಿರವಿವೆ. ಕೆಲ ಗಂಟೆಗಳ ವಿರಾಮದ ಬಳಿಕ ಮಧ್ಯಾಹ್ನ 11.30ಕ್ಕೆ ಪುನಃ ಗುಂಡಿನ ಚಕಮಕಿ ಆರಂಭವಾದ ಕುರಿತು ವರದಿ ಬಂದಿತು.
ಗ್ರಾಮಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕಂಗ್ವಾಯಿ ಜಿಲ್ಲೆಗೆ ತೆರಳಿದ್ದಾರೆ ಎಂದು ಅವರು ತಿಳಿಸಿದರು.