ವಿಝಿಂಜಂ: ಅಗೆಯುವ ಕೆಲಸ ಮಾಡುತ್ತಿದ್ದಾಗ ಬಾವಿಯಲ್ಲಿ ಭೂಕುಸಿತ ಸಂಭವಿಸಿ ಅನ್ಯರಾಜ್ಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಪಾರ್ವತಿಪುರಂ ನಿವಾಸಿ ಮಹಾರಾಜ್ (50) ಮೃತರು. ಇಂದು ಬೆಳಗ್ಗೆ ಮೃತದೇಹವನ್ನು ಹೊರ ತೆಗೆಯಲಾಯಿತು. ಎನ್‍ಡಿಆರ್‍ಎಫ್ ಸೇರಿದಂತೆ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನ ಜೀವ ಉಳಿಸಲಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ಕಾರ್ಮಿಕರು, ಎನ್‍ಡಿಆರ್‍ಎಫ್ ಮತ್ತು ಪೋಲೀಸ್ ತಂಡಗಳು ಮಹಾರಾಜರನ್ನು ರಕ್ಷಿಸಲು ಹಗಲಿರುಳು ಶ್ರಮಿಸಿದ್ದರು. ಆದರೆ ಯಂತ್ರ ಸಹಿತ ಕೆಳಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು.
ವಿಝಿಂಜಂ ಮುಕೋಲದಲ್ಲಿ ಶನಿವಾರ ಅವಘಡ ಸಂಭವಿಸಿತ್ತು. ಮಹಾರಾಜ ಎಂಬವರು ಕೆಲಸ ಮಾಡುವಾಗ ಭೂಕುಸಿತದಿಂದ 90 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಸುಮಾರು 20 ಅಡಿ ಮಣ್ಣು ಬಿದ್ದಿದೆ. ರಕ್ಷಣಾ ಕಾರ್ಯಕರ್ತರು ಸುಮಾರು 80 ಅಡಿ ಆಳವನ್ನು ತಲುಪಿದರು, ಆದರೆ ನಂತರ ನೀರು ಮತ್ತು ಮಣ್ಣು ರಕ್ಷಣಾ ಕಾರ್ಯಾಚರಣೆಯನ್ನು ಬಹಳ ಕಷ್ಟಕರವಾಗಿಸಿತು.
ವಿಝಿಂಜಂನ ಮುಕೋಲ ಶಕ್ತಿಪುರಂ ರಸ್ತೆಯಲ್ಲಿರುವ ಅಶ್ವತಿ ಎಂಬಲ್ಲಿ ಸುಕುಮಾರನ್ ಅವರ ಮನೆಯಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. 90 ಅಡಿ ಆಳದ ಬಾವಿಗೆ ಕಾಂಕ್ರೀಟ್ ಕವಚ ಅಳವಡಿಸುವ ಕಾರ್ಯ ನಾಲ್ಕು ದಿನಗಳಿಂದ ನಡೆಯುತ್ತಿತ್ತು. ಕೆಲ ದಿನಗಳಿಂದ ಸುರಿದ ಮಳೆಯ ನಂತರ ಶನಿವಾರ ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಈ ನಡುವೆ ಸುಮಾರು 20 ಅಡಿಯಷ್ಟು ಮಣ್ಣು ಬಾವಿಗೆ ಕುಸಿಯಿತು.
ಯಂತ್ರಗಳನ್ನು ತಂದು ತಪಾಸಣೆ ಮಾಡುವುದು ಅಸಾಧ್ಯವಾದ ಕಾರಣ ಕಾರ್ಮಿಕರನ್ನು ಬಳಸಿ ಬಾವಿಯಿಂದ ಮಣ್ಣು ತೆಗೆದು ಮಹಾರಾಜರನ್ನು ಹೊರತರಲು ಪ್ರಯತ್ನಿಸಲಾಯಿತು. ವಿಶೇಷ ಕಾರ್ಯಪಡೆ, ಚಕ್ಕ ವಿಝಿಂಜಂ ಪ್ರದೇಶದ ಅಗ್ನಿಶಾಮಕ ದಳ ಮತ್ತು ಕೇರಳ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. 28 ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರೂ ಕಾರ್ಮಿಕನÀನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ.