HEALTH TIPS

ಮಣಿರತ್ನಂ ಸಹಯೋಗದಲ್ಲಿ ಕೇರಳ ಸಿನಿಮಾ ಪ್ರವಾಸೋದ್ಯಮ

                ತಿರುವನಂತಪುರಂ: ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಭಾಗವಾಗಿ ಕೇರಳ ಸರ್ಕಾರವು 'ಸಿನಿಮಾ ಪ್ರವಾಸೋದ್ಯಮ ಯೋಜನೆ' ಎಂಬ ವಿ‌ನೂತನ ಪ್ರಯತ್ನವೊಂದನ್ನು ಆರಂಭಿಸಿದೆ‌. ಇದಕ್ಕಾಗಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬೆಂಬಲವನ್ನೂ ಕೋರಿದೆ.

                  ವಿನೂತನ ಪ್ರಯತ್ನದ ಮಾಹಿತಿಗಳನ್ನೊಳಗೊಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕೇರಳದ ಪ್ರವಾಸೋದ್ಯಮ ಇಲಾಖೆಯು, ಸರ್ಕಾರದ ಯೋಜನೆಗೆ ಮಣಿರತ್ನಂ ಅವರು ಬೆಂಬಲ ನೀಡಿದ್ದಾರೆ ಎಂದು ಹೇಳಿದೆ.

               'ಪ್ರವಾಸಿಗರನ್ನು ಆಕರ್ಷಿಸಲು ಜನಪ್ರಿಯ ಚಿತ್ರಗಳಲ್ಲಿ ತೋರಿಸಲಾದ ರಾಜ್ಯದ ಪ್ರಮುಖ ಸ್ಥಳಗಳನ್ನು ಪರಿಚಯಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮದ್‌ ರಿಯಾಸ್‌ ಅವರೊಂದಿಗೆ ನಡೆದ ಸಭೆಯಲ್ಲಿ, ಜನರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದ ಸ್ಥಳಗಳನ್ನು ತೋರಿಸಲು ಮಣಿರತ್ನಂ ಅವರು ಒಪ್ಪಿಕೊಂಡಿದ್ದಾರೆ' ಎಂದಿದೆ.

                 'ಮಣಿರತ್ನಂ ಅವರ ಬಾಂಬೆ ಚಲನಚಿತ್ರದಲ್ಲಿ ಚಿತ್ರೀಕರಣ ಮಾಡಲಾದ ಕಾಸರಗೋಡು ಜಿಲ್ಲೆಯ ಬೇಕಲ್‌ ಕೋಟೆಯಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ಮಣಿರತ್ನಂ ಅವರಲ್ಲದೇ ಚಲನಚಿತ್ರದಲ್ಲಿ ನಟಿಸಿದ ಕಲಾವಿದರೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ' ಎಂದೂ ಅದು ಹೇಳಿದೆ.

                'ರಿಯಾಸ್‌ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಮಣಿರತ್ನಂ ಅವರು ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ' ಎಂದು ಅದು ಮಾಹಿತಿ ನೀಡಿದೆ.

                    ಮಣಿರತ್ನಂ ಅವರ ಅನೇಕ ಚಿತ್ರಗಳು, ಪ್ರಮುಖವಾಗಿ ಹಾಡುಗಳ ಚಿತ್ರೀಕರಣವು ಕೇರಳದಲ್ಲಿ ನಡೆದಿದೆ.  'ಮಣಿರತ್ನಂ ಅವರ ಪ್ರೋತ್ಸಾಹವು ಸಿನಿಮಾ ಪ್ರವಾಸೋದ್ಯಮ ಯೋಜನೆಗೆ ಪ್ರಮುಖ ಉತ್ತೇಜನ ನೀಡಿದೆ' ಎಂದು ರಿಯಾಸ್‌ ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries