ಕಾಸರಗೋಡು: ದೇವಸ್ಥಾನಗಳ ಜೀರ್ಣೋದ್ಧಾರ ಸಮಾಜದ ಜನತೆಯ ಆತ್ಮೋನ್ನತಿಗೆ ಕಾರಣವಾಗುವುದಾಗಿ ಶ್ರೀಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ ತಿಳಿಸಿದ್ದಾರೆ. ಅವರು ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಮುಖಂಡ, ಸಮಾಜಸೇವಕ, ಖ್ಯಾತ ವೈದ್ಯ ಡಾ. ಅನಂತ ಕಾಮತ್ ಹಾಗೂ ಸಮಿತಿ ಪದಾಧಿಕಾರಿಗಳಿಗೆ ವಿಜ್ಞಾಪನಾ ಪತ್ರ ಹಸ್ತಾಂತರಿಸಿದರು.
ಕೆ ವೇಣುಗೋಪಾಲ್. ಹಿರಿಯ ಧಾರ್ಮಿಕ ಮುಖಂಡ ಕೆ.ಎನ್ ವೆಂಕಟರಮಣ ಹೊಳ್ಳ, ರಘು ಮೀಪುಗುರಿ, ಕೃಷ್ಣ ಕತ್ತರ್, ಮೀರಾ ಕಾಮತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್. ಪ್ರಧಾನ ಕಾರ್ಯದರ್ಶಿ ಹರೀಶ್ ಕೆ. ಆರ್, ಆಡಳಿತ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ದರ್ಮದರ್ಶಿ ನಾರಾಯಣಪೂಜಾರಿ, ಶಾಂತಕುಮಾರ್ ಮುಂಡಿತಡ್ಕ ಮೊದಲಾದವರು ಉಪಸ್ಥಿತರಿದ್ದರು.