ತಿರುವನಂತಪುರಂ: ಕೇರಳ ಪೆÇಲೀಸ್‍ನ ಯಾವುದೇ ಸಿಬ್ಬಂದಿಯನ್ನು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯದಲ್ಲಿರಲು ಅನುವಿಲ್ಲ ಎಂದು ಹೇಳಿ ವಿಶೇಷ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರು ಮತ್ತು ಹಿರಿಯ ವಯಸ್ಸಿನ ಉದ್ಯೋಗಿಗಳು ಸೇರಿದಂತೆ ಕೇರಳ ಪೋಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ಅಕಾಡೆಮಿಯಲ್ಲಿ 15ರಿಂದ 20 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವರಿಗೆ ವಿನಾಯ್ತಿ(??) ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಅಕಾಡೆಮಿಯಲ್ಲಿ ತಮ್ಮ ಆಡಳಿತದ ಪ್ರಭಾವ ಬಳಸಿ ಅವಿರೋಧವಾಗಿ ಆಯ್ಕೆಯಾದ ನಂತರ ರಾಜ್ಯ ನಾಯಕತ್ವದ ಮೊರೆ ಹೋಗಲು ಇದೇ ಪದಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಮಹಿಳೆಯರು ಸೇರಿದಂತೆ ಪೋಲೀಸರನ್ನು ಅವರ ಸೇವಾವಧಿ ಮುಗಿದಿದೆ ಎಂಬ ಕಾರಣಕ್ಕೆ ಆಯಾ ಘಟಕಗಳಿಗೆ ವಾಪಸ್ ಕಳುಹಿಸಲಾಗಿದೆ.
ಹವಾಲ್ದಾರರು, ವಿವಿಧ ವಿಭಾಗಗಳ ಅಧಿಕಾರಿಗಳನ್ನೂ ವಾಪಸ್ ಕಳುಹಿಸಲಾಯಿತು. ಆದರೆ 15ರಿಂದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳು ಬದಲಾಗಿಲ್ಲ. ಸಂಸಾರ ಸಮೇತ ವಾಸವಾಗಿದ್ದ ಮಹಿಳೆಯರನ್ನೂ ವಾಪಸ್ ಕಳುಹಿಸಿದರೂ ಬೆಟಾಲಿಯನ್ ಅಧಿಕಾರಿಗಳು ಮಾತ್ರ ಬದಲಾಗದಿರುವುದು ಪೆÇಲೀಸ್ ಪಡೆಯಲ್ಲಿ ಆಕ್ರೋಶ ಮಡುಗಟ್ಟಲು ಕಾರಣವಾಗಿದೆ.