ಕಾಸರಗೋಡು: ಸೀತಾಂಗೋಳಿ ಸಮೀಪದ ಬೇಳ ಚೌಕಾರು ಪಿಲಿಪಳ್ಳ ನಿವಾಸಿ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರ ಥಾಮಸ್ ಕ್ರಾಸ್ತ (63) ಎಂಬವರ ಮೃತದೇಹ ಇವರ ಮನೆ ಸಮೀಪದ ನಿರ್ಮಾಣ ಹಂತದಲ್ಲಿರುವ ಶೌಚಗೃಹದ ಹೊಂಡದಲ್ಲಿ ಗೋಣಿಚೀಲದಲ್ಲಿ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಥಾಮಸ್ ಕ್ರಾಸ್ತ ಸಾವಿನ ಬಗ್ಗೆ ನಿಗೂಢತೆ ಕಂಡುಬಂದಿದೆ. ಮೃತದೇಹದ ತಲೆ, ಕೈ, ಕಾಲುಗಳಲ್ಲಿ ಗಾಯದ ಗುರುತುಗಳಿವೆ. ಹೆಚ್ಚಿನ ತಪಾಸಣೆಗಾಘೀ ಮೃತದೇಹ ಪರಿಯಾರಂ ರ್ಔಯದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ಪರಿಸರದಲ್ಲಿ ವಾಸಿಸುತ್ತಿರುವ ಇತರ ರಾಜ್ಯ ಕಾರ್ಮಿಕರನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದ್ದಾರೆ.
ಕಳೆದೆರಡು ದಿವಸಗಳಿಂದ ಥಾಮಸ್ ಕ್ರಾಸ್ತ ನಾಪತ್ತೆಯಾಗಿದ್ದು ಈ ಬಗ್ಗೆ ಬದಿಯಡ್ಕ ಪೆÇೀಲಿಸ್ ಠಾಣೆಗೆ ದೂರು ನೀಡಲಾಗಿತ್ತು. ಹುಡುಕಾಟದ ವೇಳೆ ಇವರ ಮನೆ ಸಮೀಪದ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಹೊಂಡದಿಂದ ದುರ್ನಾತ ಬೀರುತ್ತಿರುವುದನ್ನು ಮನಗಂಡು ತೆರಳಿ ನೋಡಿದಾಗ ಮೃತದೇಹ ಕಾಲುಮೇಲಾಗಿ ತಲೆ ಹೊಂಡಕ್ಕೆ ತಗುಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಗೈದು ಹೊಂಡಕ್ಕೆ ತಳ್ಳಿರುವ ಸಾಧ್ಯತೆ ಬಗ್ಗೆಯೂ ಸಂಶಯ ವ್ಯಕ್ತಪಡಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಳವೆ ಬಾವಿ ನಿರ್ಮಾಣ ಗುತ್ತಿಗೆದಾರರಾಗಿರುವ ಥಾಮಸ್ ಕ್ರಾಸ್ತ ಅವರು ತಮಿಳುನಾಡಿನ ಬೋರ್‍ವೆಲ್ ಕಂಪೆನಿಯೊಡನೆ ಸೇರಿ ಈ ಪ್ರದೇಶದಲ್ಲಿ ಕೊಳವೆ ಬಾವಿ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.