ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ರಾಜ್ಯ ಸಮಿತಿಯ ಕರೆಯಂತೆ ರಾಜ್ಯಾದ್ಯಂತ ಆಯಾ ಸ್ಥಳೀಯ ಮಟ್ಟದಲ್ಲಿ ವಂಚನಾ ದಿನ ಆಚರಿಸಲಾಯಿತು.
ಕುಂಬಳೆ ಪ್ರೆಸ್ ಪೋರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ.ಎಂ. ಸತ್ತಾರ್ ಉದ್ಘಾಟಿಸಿದರು. ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅಧ್ಯಕ್ಷತೆ ವಹಿಸಿದ್ದರು.
ಕೆಜೆಯು ಸಂಘಟನೆ ಸ್ಥಳೀಯ ಮಾಧ್ಯಮ ಪತ್ರಕರ್ತರನ್ನು ಸಾಂಸ್ಕøತಿಕ ಕಲ್ಯಾಣ ನಿಧಿಗೆ ಸೇರಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಒತ್ತಡದ ನಂತರ ಸರ್ಕಾರದ ಪ್ರತಿನಿಧಿಗಳು ಸಚಿವ ಸಂಪುಟವು ಬೇಡಿಕೆಯನ್ನು ಅಂಗೀಕರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ನಾಯಕರಿಗೆ ತಿಳಿಸಿತ್ತು. ವರ್ಷಗಳೇ ಕಳೆದರೂ ಭರವಸೆ ಈಡೇರದ ಪರಿಸ್ಥಿತಿಯಲ್ಲಿ ಜುಲೈ 24ರಂದು ರಾಜ್ಯಾದ್ಯಂತ ವಂಚನೆ ದಿನವನ್ನಾಗಿ ಆಚರಿಸಲು ಕೇರಳ ಪತ್ರಕರ್ತರ ಸಂಘದ ರಾಜ್ಯ ನಾಯಕತ್ವ ಕರೆ ನೀಡಿತ್ತು.
ಪತ್ರಕರ್ತರಾದ ತಾಹಿರ್ ಬಿ.ಐ ಉಪ್ಪಳ ಹಾಗೂ ಅಶ್ರಫ್ ಕುಂಬಳೆ ಮಾತನಾಡಿದರು.ಕುಂಬಳೆ ಪ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಝುಬೈರ್ ಉಪ್ಪಳ ವಂದಿಸಿದರು.