ತಿರುವನಂತಪುರಂ: ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸಬಹುದು ಅಥವಾ ಧರಿಸದಿರಲು ಸ್ವತಂತ್ರರಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಏಪ್ರಿಲ್ 27, 2022 ರ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಮಾರ್ಚ್ 2020 ರಲ್ಲಿ, ರಾಜ್ಯದಲ್ಲಿ ಮೊದಲ ಬಾರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಕೊರೊನಾ ಭೀತಿ ಕಡಿಮೆಯಾದ ನಂತರ ಹಲವರು ಮಾಸ್ಕ್ ಧರಿಸುವುದನ್ನು ನಿಲ್ಲಿಸಿದ್ದಾರೆ. ಆದಾಗ್ಯೂ, ಮುಖ್ಯ ಕಾರ್ಯದರ್ಶಿ ಏಪ್ರಿಲ್ 2022 ರಲ್ಲಿ ಆದೇಶಗಳನ್ನು ಹೊರಡಿಸಿದ್ದರು ಮತ್ತು ಕಳೆದ ಜನವರಿಯಲ್ಲಿ ವೈರಸ್ ಹರಡುವಿಕೆ ಮತ್ತೆ ಹೆಚ್ಚಾದಾಗ ಮಾಸ್ಕ್ ಕಡ್ಡಾಯವಾಗಿದೆ ಎಂದು ನೆನಪಿಸಿದ್ದರು. ಕೊರೊನಾ ಭೀತಿ ಅಸ್ತಿತ್ವದಲ್ಲಿಲ್ಲ ಎಂಬ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರ ಈ ಆದೇಶಗಳನ್ನು ಹಿಂಪಡೆದಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ, ಪೆÇಲೀಸರು ಮಾಸ್ಕ್ ಧರಿಸದವರಿಗೆ 500 ರೂ ದಂಡ ವಿಧಿಸುತ್ತಿದ್ದರು.