'ಮಣಿಪುರದ ಮೈತೇಯಿ ಮಹಿಳಾ ಹೋರಾಟಗಾರರ ಗುಂಪು 'ಮೆಇರಾ ಪೈಬಿಸ್'ನ ಸದಸ್ಯರು ಸೇನೆ ಮತ್ತು ಅರೆಸೇನಾ ಪಡೆಗಳ ಸಂಚಾರಕ್ಕೆ ತಡೆ ಒಡ್ಡುತ್ತಿದ್ದಾರೆ. ಮತ್ತು ಕುಕಿ ಜನರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ನೆರವು ನೀಡುತ್ತಿದ್ದಾರೆ' ಎಂದು ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ಆರೋಪಿಸಿದ್ದಾರೆ.
ಮೆಇರಾ ಪೈಬಿ ಸದಸ್ಯರು ಈ ರೀತಿ ಮಾಡುವುದನ್ನು ತಡೆದರೆ, ಹಿಂಸಾಚಾರವನ್ನು ನಿಯಂತ್ರಿಸಬಹುದು. ಆದರೆ ಈ ಮೈತೇಯಿ ಮಹಿಳೆಯರನ್ನು ನಿಗ್ರಹಿಸಲು ನಮ್ಮಲ್ಲಿ ಅಗತ್ಯ ಪ್ರಮಾಣದ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ತುಕಡಿ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಮೆಇರಾ ಪೈಬಿಸ್ ಎಂದು ಹೇಳಿಕೊಳ್ಳುವ ಈ ಮಹಿಳೆಯರು ಎಲ್ಲೆಡೆಯು ಸೇನೆ ಮತ್ತು ಅರೆಸೇನಾ ಪಡೆಯ ಓಡಾಟಕ್ಕೆ ತಡೆ ಒಡ್ಡುತ್ತಾರೆ. ತಡೆ ಒಡ್ಡಬೇಡಿ ಎಂದು ಭದ್ರತಾ ಸಿಬ್ಬಂದಿ ಹೇಳಿದರೆ, 'ಬೆತ್ತಲಾಗುತ್ತೇವೆ' ಎಂದು ಬೆದರಿಕೆ ಒಡ್ಡುತ್ತಾರೆ. ಈಗ ರಾಜ್ಯದ ಗುಡ್ಡಗಾಡು ಪ್ರದೇಶಗಳಿಗೆ ಭದ್ರತಾ ಸಿಬ್ಬಂದಿ ಹೋಗುವುದನ್ನು ಇವರು ತಡೆಯುತ್ತಿದ್ದಾರೆ. ಕಡ್ಡಿ-ದೊಣ್ಣೆಗಳನ್ನು ಹಿಡಿದು ಅಲ್ಲಲ್ಲಿ ರಸ್ತೆ ತಡೆ ನಡೆಸುತ್ತಾರೆ' ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
'ಕುಕಿ ಮತ್ತು ಮೈತೇಯಿ ಜನರ ನಡುವೆ ಗುಡ್ಡಗಾಡು ಪ್ರದೇಶದಲ್ಲಿ ಘರ್ಷಣೆ ನಡೆಯುತ್ತಿದ್ದರೆ, ಅಲ್ಲಿಗೆ ಸೇನಾ ತುಕಡಿ ಅಥವಾ ಅರೆಸೇನಾ ಪಡೆಗಳನ್ನು ಕಳುಹಿಸಲಾಗುತ್ತದೆ. ಆದರೆ, ಮೈತೇಯಿ ಮಹಿಳೆಯರಾದ ಮೆಇರಾ ಪೈಬಿಸ್ ಸದಸ್ಯರು ಸೇನಾ ತುಕಡಿಗಳನ್ನು ತಡೆಯುತ್ತಾರೆ. ಭದ್ರತಾ ಸಿಬ್ಬಂದಿಯ ಗುರುತಿನ ಚೀಟಿಗಳನ್ನು ಕೇಳುತ್ತಾರೆ. ಈ ಮೂಲಕ ಘರ್ಷಣೆಯ ಸ್ಥಳಕ್ಕೆ ಸೇನಾ ಸಿಬ್ಬಂದಿ ಹೋಗುವುದನ್ನು ವಿಳಂಬ ಮಾಡುತ್ತಿದ್ದಾರೆ' ಎಂದು ಸೇನಾಧಿಕಾರಿಗಳು ಆರೋಪಿಸಿದ್ದಾರೆ.
'ಸೇನಾ ಸಿಬ್ಬಂದಿ ಮಾತ್ರವಲ್ಲ. ಗುಡ್ಡಗಾಡು ಪ್ರದೇಶಗಳಿಗೆ ಹೋಗುವ ಪತ್ರಕರ್ತರು, ಸ್ವಯಂಸೇವಾ ಸಂಘಟನೆಗಳ ಸದಸ್ಯರನ್ನೂ ಈ ಮಹಿಳೆಯರು ತಡೆಯುತ್ತಿದ್ದಾರೆ. ಹೋರಾಟಗಾರರ ಹೆಸರಿನಲ್ಲಿ, ದೌರ್ಜನ್ಯ ಎಸಗಲು ನೆರವು ನೀಡುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಹೆಚ್ಚಿನ ಮಹಿಳಾ ಸಿಬ್ಬಂದಿಯ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾ ಜತೆ ಮೆಇರಾ ಪೈಬಿಸ್ ಸಭೆ: ಮೆಇರಾ ಪೈಬಿಸ್ ಸದಸ್ಯರ ಜೆತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ ಮೇ 30ರಂದು ಸಭೆ ನಡೆಸಿದ್ದರು. ಆನಂತರವೂ ಈ ಮಹಿಳೆಯರು ಸೇನೆ ಮತ್ತು ಅರೆಸೇನಾ ಕಾರ್ಯಾಚರಣೆಗಳಿಗೆ ತಡೆ ಒಡ್ಡುತ್ತಿದ್ದಾರೆ.
ತಮಿಳುನಾಡು ಯುವ ಕಾಂಗ್ರೆಸ್ ಕಾರ್ಯಕರ್ತರು ಚೆನ್ನೈನಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು -ಪಿಟಿಐ ಚಿತ್ರಸೇನಾ ಕಾರ್ಯಾಚರಣೆರಗೆ