ತಿರುವನಂತಪುರಂ: ರಾಜ್ಯಪಾಲರ ವಿರುದ್ಧ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು. ಮತ್ತೆ ಕಿಡಿಕಾರಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೇರಳದ ಅತ್ಯುತ್ತಮ ಸಾಧನೆಗಳನ್ನು ಕೀಳಾಗಿ ಮಾಡಲು ಉದ್ದೇಶಪೂರ್ವಕ ಮಾಡಿರುವ ಪ್ರಯತ್ನಗಳು ವಿಷಾದನೀಯ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.
ನ್ಯಾಕ್ ಮತ್ತು ಎನ್.ಐ.ಆರ್.ಎಫ್ ಸ್ಪಷ್ಟ ಮಾನದಂಡಗಳ ಆಧಾರದ ಮೇಲೆ ಗ್ರೇಡ್ ಮತ್ತು ಶ್ರೇಣಿಯನ್ನು ನಿರ್ಧರಿಸುತ್ತವೆ. ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಎಲ್ಲಾ ಮಾನದಂಡಗಳಲ್ಲಿನ ಶ್ರೇಷ್ಠತೆಯ ಆಧಾರದ ಮೇಲೆ ಉನ್ನತ ದರ್ಜೆ ಮತುÉ್ಠನ್.ಐ.ಆರ್.ಎಫ್ ಶ್ರೇಯಾಂಕವನ್ನು ನೀಡಲಾಗುತ್ತದೆ. ಕೇರಳ ವಿಶ್ವವಿದ್ಯಾನಿಲಯವು ನ್ಯಾಕ್ ಮಾನ್ಯತೆಯಲ್ಲಿ ಎ ಪ್ಲಸ್ ಮತ್ತು ಎನ್.ಐ.ಆರ್.ಎಫ್ ಶ್ರೇಯಾಂಕದಲ್ಲಿ ದೇಶದಲ್ಲಿ 24 ನೇ ಸ್ಥಾನವನ್ನು ಸಾಧಿಸಿದೆ. ಕ್ಯಾಲಿಕಟ್, ಕಾಲಡಿ ಶ್ರೀಶಂಕರ ಮತ್ತು ಕುಸಾಟ್ ವಿಶ್ವವಿದ್ಯಾಲಯಗಳು ಎ ಪ್ಲಸ್ ಪಡೆದಿವೆ. ಟೈಮ್ಸ್ ಶ್ರೇಯಾಂಕದಲ್ಲಿ ಎಂಜಿ ವಿಶ್ವವಿದ್ಯಾಲಯವು ಏಷ್ಯಾದಲ್ಲಿ 95 ನೇ ಸ್ಥಾನದಲ್ಲಿದೆ.
ಕೇರಳವು ನ್ಯಾಕ್ ಎ ಪ್ಲಸ್ ï ಸಾಧಿಸಿದ 16 ಶಿಕ್ಷಣ ಸಂಸ್ಥೆಗಳನ್ನು ಮತ್ತು ಎ ಪ್ಲಸ್ ಸಾಧಿಸಿದ 31 ವಿದ್ಯಾಲಯಗಳನ್ನು ಹೊಂದಿದೆ. ಎನ್.ಐ.ಆರ್.ಎಫ್ ಶ್ರೇಯಾಂಕದಲ್ಲಿ, ಅಗ್ರ 200 ರಲ್ಲಿ 42 ಕೇರಳದಲ್ಲಿವೆ. ದೇಶದ 21% ಅತ್ಯುತ್ತಮ ಕಾಲೇಜುಗಳು ಕೇರಳದಲ್ಲಿವೆ. ಈ ಎಲ್ಲಾ ಸಾಧನೆಗಳು ಹೆಮ್ಮೆಪಡಿಸುತ್ತದೆ.
ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸಮೀಕ್ಷಾ ವರದಿಯಲ್ಲಿಯೂ ಕೇರಳ ವಿವಿಧ ಮಾನದಂಡಗಳಲ್ಲಿ ಬಹಳ ಮುಂದಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಉತ್ತರ ಭಾರತದ ಜನರು ಶ್ರೇಯಾಂಕ ಪ್ರಕ್ರಿಯೆಗಾಗಿ ಸಂಸ್ಥೆಗಳಿಗೆ ಬರುತ್ತಾರೆ. ಕೇರಳದ ಪರ ವಹಿಸಿ ಉನ್ನತ ಅಂಕಗಳನ್ನು ನೀಡದಿರುವುದು ಖಚಿತ ಎಂದ ಸಚಿವರು, ವಿಶ್ವವಿದ್ಯಾನಿಲಯಗಳಲ್ಲಿ ನಕಲಿ ದಾಖಲೆ ಸೇರಿದಂತೆ ನಾನಾ ಅವ್ಯವಹಾರಗಳನ್ನು ಎತ್ತಿ ಹಿಡಿದ ರಾಜ್ಯಪಾಲರು ಉನ್ನತ ಶಿಕ್ಷಣ ಕ್ಷೇತ್ರದ ಕೆಟ್ಟ ಪ್ರವೃತ್ತಿಯನ್ನು ಲೇವಡಿ ಮಾಡಿದ್ದಾರೆ ಎಂದು ಟೀಕಿಸಿರುವರು.