ನವದೆಹಲಿ: ಸ್ಟ್ರೀಮಿಂಗ್ ದೈತ್ಯ ನೆಟ್‌ಪ್ಲಿಕ್ಸ್ ಭಾರತದಲ್ಲಿ ಇನ್ನುಮುಂದೆ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಅನುಮತಿಸುವುವುದಿಲ್ಲ ಎಂದು ಘೋಷಿಸಿದೆ. ಪ್ರತಿ ಖಾತೆಯನ್ನು ಒಂದು ಮನೆಯವರು ಮಾತ್ರ ಬಳಸಬೇಕು ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ತಮ್ಮ ಮನೆಯ ಹೊರಗೆ ನೆಟ್‌ಪ್ಲಿಕ್ಸ್ ಅನ್ನು ಹಂಚಿಕೊಳ್ಳುತ್ತಿರುವ ಸದಸ್ಯರಿಗೆ Netflix ಈ ಇಮೇಲ್ ಅನ್ನು ಕಳುಹಿಸುತ್ತದೆ.
ನೆಟ್‌ಪ್ಲಿಕ್ಸ್ ಖಾತೆಯು ಒಂದು ಮನೆಯ ಬಳಕೆಗಾಗಿ ಇರುವಂತಹದ್ದು. ಆ ಮನೆಯಲ್ಲಿ ವಾಸಿಸುವ ಸದಸ್ಯರು, ಎಲ್ಲೇ ಇದ್ದರೂ ಪ್ರೊಫೈಲ್ ವರ್ಗಾಯಿಸಿ ಮತ್ತು ಪ್ರವೇಶ ಮತ್ತು ಸಾಧನಗಳನ್ನು ನಿರ್ವಹಿಸುವಂತಹ ಹೊಸ ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳಬಹುದು.
ನಮ್ಮ ಬಳಕೆದಾರರಿಗೆ ಅನೇಕ ಮನರಂಜನಾ ಆಯ್ಕೆಗಳಿವೆ ಎಂದು ನಾವು ತಿಳಿದಿದ್ದೇವೆ. ಅದಕ್ಕಾಗಿಯೇ ನಾವು ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ನಿಮ್ಮ ಅಭಿರುಚಿ, ಮನಸ್ಥಿತಿ, ಭಾಷೆ ಏನೇ ಇದ್ದರೂ, ನೆಟ್‌ಪ್ಲಿಕ್ಸ್‌ನಲ್ಲಿ ನಿಮಗೆ ವೀಕ್ಷಿಸಲು ಯಾವಾಗಲೂ ಏನಾದರೂ ತೃಪ್ತಿಕರ ವಿಚಾರ ಇದ್ದೇ ಇರುತ್ತದೆ' ಎಂದು ನೆಟ್‌ಪ್ಲಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ನೆಟ್ಫ್ಲಿಕ್ಸ್ ಭಾರತ ಸೇರಿದಂತೆ ಇಂಡೋನೇಷ್ಯಾ, ಪ್ರೊಯೇಷಿಯಾ ಮತ್ತು ಕೀನ್ಯಾದಂತಹ ಇತರ ದೇಶಗಳಲ್ಲಿ (ಜು.20) ಇಂದಿನಿಂದ ಪಾಸ್ವರ್ಡ್ ಹಂಚಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ.