ಇಸ್ಲಾಮಾಬಾದ್: ಗಾಂಧಾರ ನಾಗರಿಕತೆಯನ್ನು ಉತ್ತೇಜಿಸುವ ಮೂಲಕ ದೇಶದಲ್ಲಿ ಶಾಂತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರಲು ಪಾಕಿಸ್ತಾನ ಮುಂದಾಗಿದೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ತಿಳಿಸಿದ್ದಾರೆ
ಅಂತರರಾಷ್ಟ್ರೀಯ ಗಾಂಧಾರ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದಿನ ಜಗತ್ತಿನಲ್ಲಿ ದ್ವೇಷ ಹೆಚ್ಚಾಗುತ್ತಿದ್ದು, ಇದು ಸಂಘರ್ಷಗಳಿಗೆ ಕಾರಣವಾಗುತ್ತಿದೆ.
ಮೂರು ದಿನಗಳ ಕಾಲ ನಡೆಯುತ್ತಿರುವ ಗಾಂಧಾರ ವಿಚಾರ ಸಂಕಿರಣದಲ್ಲಿ 2023ರ 'ಸಾಂಸ್ಕೃತಿಕ ರಾಜತಾಂತ್ರಿಕ' ಕಾರ್ಯಕ್ರಮದಲ್ಲಿ ಚೀನಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂನ ವಿದೇಶಿ ನಿಯೋಗಗಳು, ಪ್ರವಾಸೋದ್ಯಮ ಪ್ರವರ್ತಕರು, ತಙ್ಙರು ಭಾಗವಹಿಸಿದ್ದಾರೆ.
ಈ ಕಾರ್ಯಕ್ರಮದ ಮೂಲಕ ಪಾಕಿಸ್ತಾನದ ಶ್ರೀಮಂತ ಬೌದ್ಧ ಪರಂಪರೆಯನ್ನು ಅನ್ವೇಷಿಸಲು ಮತ್ತು ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಗಾಂಧಾರ ನಾಗರೀಕತೆಯ ಪ್ರಮುಖ ಅಂಶಗಳನ್ನು ತಿಳಿಸಿದ ಅಲ್ವಿ , ಆಕರ್ಷಕ ಬೌದ್ಧ ಸ್ಥಳಗಳನ್ನು ಅನ್ವೇಷಿಸಲು ಬಯಸುವವರಿಗೆ ಪಾಕಿಸ್ತಾನವು ತಿಳಿವಳಿಕೆ ನೀಡುವ ಉತ್ತಮ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ಆನ್‌ಲೈನ್ ಮೂಲಕ ಪ್ರವಾಸಿಗರಿಗೆ ತ್ವರಿತಗತಿಯಲ್ಲಿ ವೀಸಾ ಪಡೆಯಲು ಸರ್ಕಾರ ವಿಶೇಷ ಗಮನ ಹರಿಸುತ್ತಿದೆ. ಪ್ರವಾಸಿಗರನ್ನು ಸ್ವಾಗತಿಸಲು ಪಾಕಿಸ್ತಾನವು ಯಾವಾಗಲೂ ಸಿದ್ಧವಾಗಿರುತ್ತದೆ ಎಂದು 'ಗಾಂಧಾರ' ಪ್ರವಾಸೋದ್ಯಮದ ಅಧ್ಯಕ್ಷ ರಮೇಶ್ ಕುಮಾರ್ ವಂಕ್ವಾನಿ ಹೇಳಿದ್ದಾರೆ.