ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿ.ಡಿ.ಎಸ್. ಸಹಭಾಗಿತ್ವದಲ್ಲಿ ಮೂಡಂಬೈಲು ವಾರ್ಡಿನ "ಆಸರೆ" ಎಂಬ ಹೆಸರಿನ ಹರಿತ ಜೆ.ಎಲ್.ಜಿ ಗುಂಪುಕೃಷಿ ಮಜಿಬೈಲ್ ನ ಕೃಷಿಕ ಹೆನ್ರಿ ಡಿಸೋಜ ರ ಮನೆಯ ವಠಾರದಲ್ಲಿ ಜರಗಿತು.
ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಗುಂಪು ಕೃಷಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಡಿ.ಎಸ್ ಅಧ್ಯಕ್ಷೆ ಶಾಲಿನಿ.ಬಿ.ಶೆಟ್ಟಿ ವಹಿಸಿದ್ದರು.
ಮೀಂಜ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲ್, ಮೂಡಂಬೈಲು ವಾರ್ಡಿನ ಸಿ. ಡಿ. ಎಸ್. ಸದಸ್ಯೆ ಲೋಲಾಕ್ಷಿ, ಮಜಿಬೈಲ್ ವಾರ್ಡಿನ ಸಿ. ಡಿ. ಎಸ್. ಸದಸ್ಯೆ ಸರಿತಾ ಕೃಷಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಸ್ಥಳೀಯ ಕೃಷಿಕರಾದ ವಿಶ್ವನಾಥ ಆಳ್ವ ಕರಿಬೈಲು, ರಮೇಶ್ ಸುವರ್ಣ, ಪ್ರಭಾಕರ ಶೆಟ್ಟಿ ಮಂಜಯಹಿತ್ಲು, ನಾಗೇಶ್ ಕಿನ್ನಿಮಾರು, ಹೆನ್ರಿ ಡಿಸೋಜ ಹಾಗೂ ಆಸರೆ ಕುಟುಂಬಶ್ರೀಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದÀರು. ಐರಿನ್ ಜೋಸ್ಫಿನ್ ಸ್ವಾಗತಿಸಿ, ಸವಿತಾ ಮಜಿಬೈಲ್ ವಂದಿಸಿದರು.