ಕಾಸರಗೋಡು: ಬೋವಿಕ್ಕಾನ ಬಿ.ಎ.ಆರ್ ಹೈಯರ್ ಸೆಕೆಂಡರಿ ಶಾಲೆಯ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಬೋವಿಕ್ಕಾನದ ಸೌಪರ್ಣಿಕಾ ಸಭಾಂಗಣದಲ್ಲಿ ಜರುಗಿತು.
ಉದುಮ ಶಾಸಕ ಸಿ.ಎಚ್. ಕುಞಂಬು ಸಮಾರಂಭ ಉದ್ಘಾಟಿಸಿದರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಮಾಜಿ ವ್ಯವಸ್ಥಾಪಕ ಅಶ್ರಫ್ ಅವರನ್ನು ನೂತನ ವ್ಯವಸ್ಥಾಪಕ ಗಂಗಾಧರನ್ ನಾಯರ್ ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ.ಶಫೀಕ್ ನಗದು ಪುರಸ್ಕಾರ ನೀಡಿ ಗೌರವಿಸಿದರು. ಜಸ್ನಾ ಸ್ಮಾರಕ ಪ್ರಶಸ್ತಿಯನ್ನು ಶಾಲಾ ರಕ್ಷಕ ಶಿಕಷಕ ಸಂಘದ ಅಧ್ಯಕ್ಷ ಮಸೂದ್ ವಿತರಿಸಿದರು. ಡಿವೈಎಸ್ಪಿ ಪಿ ಬಾಲಕೃಷ್ಣನ್ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಂ ಮಾಧವನ್, ಅನಿಸಾಮನ್ಸೂರ್ ಮಲ್ಲತ್, ಎಂ ಕುಞಂಬು ನಂಬಿಯಾರ್, ಅಬ್ಬಾಸ್ ಕೊಳಚೆಪ್, ಎ.ಅನಿಲಕುಮಾರ್ ಉಪಸ್ಥೀತರಿದ್ದರು. ಪ್ರಾಂಶುಪಾಲ ವಿ.ಮೆಜೋ ಜೋಸೆಫ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ ನಾರಾಯಣನ್ ವಂದಿಸಿದರು.