HEALTH TIPS

ಅಮರ್ತ್ಯ ಸೆನ್ ಪರ ರಾಷ್ಟ್ರಪತಿಗೆ ಪತ್ರ: ವಿಶ್ವಭಾರತಿ ವಿ.ವಿ. ಆಶ್ಚರ್ಯ

              ಕೋಲ್ಕತ್ತ: ಆರ್ಥಿಕ ತಜ್ಞ ಅಮರ್ತ್ಯ ಸೆನ್‌ ಅವರ ನಿವಾಸ ನಿರ್ಮಾಣಕ್ಕೆ ವಿಶ್ವವಿದ್ಯಾಲಯದ ಭೂಮಿ ಒತ್ತುವರಿ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 300 ಮಂದಿ ಪ್ರಮುಖರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವುದಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ.

             ಈ ಪ್ರಕರಣ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿದ ದಿನವೇ ಈ ಪತ್ರ ಬರೆಯಲಾಗಿದೆ. ರಾಷ್ಟ್ರಪತಿ ಅವರು ವಿಶ್ವವಿದ್ಯಾಲಯದ ಅತಿಥಿ ಗಣ್ಯರಾಗಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊಂಡು ವಿಶ್ವವಿದ್ಯಾಲಯದ ಕುಲಪತಿ ಸೆನ್‌ ಅವರನ್ನು ಗುರಿ ಮಾಡುತ್ತಿರುವುದಕ್ಕೆ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

             ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕದ ಆರ್ಥಿಕ ತಜ್ಞ ಜಾರ್ಜ್‌ ಎ ಕೆರ್ಲಾಫ್, ಅರ್ಥಶಾಸ್ತ್ರಜ್ಞ ಅಮಿಯಾ ಬಾಗ್ಚಿ ಪತ್ರಕ್ಕೆ ಸಹಿ ಹಾಕಿರುವ 300 ಪ್ರಮುಖರಲ್ಲಿ ಸೇರಿದ್ದಾರೆ.

                ಅಮರ್ತ್ಯ ಸೆನ್‌ ಅವರ ನಿವಾಸವನ್ನು ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಸುಮಾರು 1.38 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಪೈಕಿ ವಿಶ್ವವಿದ್ಯಾಲಯದ 0.13 ಎಕರೆ ಭೂಮಿ ಸೇರಿದ್ದು, ಇದು ಒತ್ತುವರಿಯಾಗಿದೆ ಎಂಬುದು ಕುಲಪತಿ ಅವರ ವಾದ. ಈ ಬಗ್ಗೆ ಅವರು ಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ಜುಲೈ 28ರಂದು ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries