HEALTH TIPS

ಆತಂಕ ಪಡುವ ಅಗತ್ಯವಿಲ್ಲ: ಅಕ್ಕಿ ತೊಳೆಯುದರಿಂದ, ಬೇಯಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳು ನಷ್ಟವಾಗುವುದಿಲ್ಲ; ಆರೋಗ್ಯಕ್ಕೆ ಪುಷ್ಠೀಕರಿಸಿದ ಅಕ್ಕಿ ಅತ್ಯಗತ್ಯ: ಡಾ. ಶಾರಿಕಾ ಯೂನಿಸ್ ಖಾನ್

                  ತಿರುವನಂತಪುರ: ಪುಷ್ಟೀಕರಿಸಿದ ಅಕ್ಕಿಯ ಬಗ್ಗೆ ಚಿಂತಿಸಲು ಯಾವುದೇ ಕಾರಣವಿಲ್ಲ. ಕಬ್ಬಿಣ, ಪೋಲಿಕ್ ಆಮ್ಲ, ವಿಟಮಿನ್ ಬಿ12, ಸತು ಮುಂತಾದ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಅಕ್ಕಿಯನ್ನು ಬಲಪಡಿಸುವ ಮೂಲಕ ಬಡವರ ಅಪೌಷ್ಠಿಕತೆಯನ್ನು ನಿವಾರಿಸಬಹುದು. ಬಲವರ್ಧಿತ ಅಕ್ಕಿಯನ್ನು ತೊಳೆಯುವ ಮತ್ತು ಅಡುಗೆ ಮಾಡುವಾಗ ಸೂಕ್ಷ್ಮ ಪೋಷಕಾಂಶಗಳು ನಷ್ಟವಾಗದ ರೀತಿಯಲ್ಲಿ ತಯಾರಿಸಲಾಗುತ್ತದೆ. ಆದ್ದರಿಂದ ಪುಷ್ಟೀಕರಿಸಿದ ಅಕ್ಕಿಯನ್ನು ಬೇಯಿಸಲು ಯಾವುದೇ ವಿಶೇಷ ವಿಧಾನದ ಅಗತ್ಯವಿಲ್ಲ. ಅಕ್ಕಿಯನ್ನು ಬೇಯಿಸುವ ಮೊದಲು ತೊಳೆದು ಬಳಸಿದರೆ ಸಾಕು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಪೌಷ್ಠಿಕಾಂಶ ಮತ್ತು ಶಾಲಾ ಆಹಾರ ಘಟಕದ ಮುಖ್ಯಸ್ಥೆ ಡಾ. ಶಾರಿಕಾ ಯೂನಿಸ್ ಖಾನ್ ಹೇಳಿರುವರು.

                    ರಾಜ್ಯ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಸಂಯುಕ್ತಾಶ್ರಯದಲ್ಲಿ ಉತ್ಕøಷ್ಟ ಅಕ್ಕಿ ವಿತರಣೆ ಕುರಿತು ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

            ತಿರುವನಂತಪುರಂ ಮೆಡಿಕಲ್ ಕಾಲೇಜ್ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಯು. ಅನುಜಾ ಮಾತನಾಡಿ, 100 ಕೆಜಿ ಅಕ್ಕಿಯೊಂದಿಗೆ 1 ಕೆಜಿ ಪುಷ್ಠೀಕರಿಸಿದ ಅಕ್ಕಿಯನ್ನು ಬೆರೆಸಲಾಗುತ್ತದೆ. ಆದ್ದರಿಂದ ಉತ್ಕೃಷ್ಟ ಅಕ್ಕಿ ಸೇವಿಸಿದರೆ ದೇಹದಲ್ಲಿ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣ ಹೆಚ್ಚಿ ಇತರೆ ಕಾಯಿಲೆಗಳು ಬರುತ್ತವೆ ಎಂಬ ಕಲ್ಪನೆ ತಪ್ಪು ಎಂದು ಡಾ.ಅನುಜಾ ಹೇಳಿದರು.

               ಪಡಿತರ ನಿಯಂತ್ರಣಾಧಿಕಾರಿ ಕೆ. ಮನೋಜ್ ಕುಮಾರ್, ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಪೋರ್ಟಿಫೈಡ್) ಹಿರಿಯ ಕಾರ್ಯಕ್ರಮ ಸಹವರ್ತಿ ಪಿ.ರಫಿ, ಎಫ್‍ಸಿಐ ಉಪ ವ್ಯವಸ್ಥಾಪಕ ಹರ್ಷಕುಮಾರ್, ಆಹಾರ ಭದ್ರತಾ ಇಲಾಖೆಯ ಉಪ ಆಯುಕ್ತ ಎಸ್. ಅಜಿ, ಬ್ಲೂಪ್ರಿಂಟ್ ಸಿಇಒ ಬೇಬಿ ಪ್ರಭಾಕರ ಮತ್ತಿತರರು ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries