HEALTH TIPS

ಚಾತುರ್ಮಾಸ್ಯ ವ್ರತಾನುಷ್ಠಾನಕ್ಕೆ ಸಜ್ಜುಗೊಳ್ಳುತ್ತಿರುವ ಯತಿಗಳು


            ಆಷಾಢಮಾಸ ಶುಕ್ಲಪಕ್ಷ ಏಕಾದಶಿ, ದ್ವಾದಶಿ ಅಥವಾ ಕರ್ಕಾಟಕ ಸಂಕ್ರಮಣದಂದು ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ. ಯಾವ ದಿನ ಆರಂಭಿಸಿದರೂ ಕಾರ್ತಿಕ  ಶುಕ್ಲ ದ್ವಾದಶಿಯಂದೇ ಮುಗಿಸಬೇಕೆಂಬುದು ಧರ್ಮಶಾಸ್ತ್ರ. ನಾಲ್ಕು ತಿಂಗಳ ಕಾಲ ಆಚರಿಸುವುದು ಮುಖ್ಯವಾದರೂ, ನಾಲ್ಕು ಪಕ್ಷ ಮಾತ್ರ ಆಚರಿಸಿದರೆ ಸಾಕೆಂಬುದು ಹೇಳಲಾಗಿದೆ. ಸಾಧು ಸಂತರು ಆಚರಿಸುವುದು ವರ್ತಮಾನದ ರೂಢಿಯಾದರೂ, ಎಲ್ಲಾ ವರ್ಣ, ಆಶ್ರಮದವರೂ ಆಚರಿಸಬಹುದು.  


         ಚಾತುರ್ಮಾಸ-ಶ್ರೀಮದ್‍ಎಡನೀರು ಮಠ

           ಜಿಲ್ಲೆಯ  ಶ್ರೀಮದ್ ಎಡನೀರು ಮಠ ಕೇರಳದ ಏಕೈಕ ಶ್ರೀ ಶಂಕರ ಪರಂಪರೆಯ ಮಠವಾಗಿದೆ. ತೋಂಟಕಾಚಾರ್ಯ ಯತಿಪರಂಪರೆಯ 20ನೇ ಯತಿ ಶ್ರೇಷ್ಠರಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಮ್ಮ ಮೂರನೇ ವರ್ಷದ ಚಾತುರ್ಮಾಸ ವ್ರತವನ್ನು ಶ್ರೀಮಠದಲ್ಲೇ ಕೈಗೊಳ್ಳಲಿದ್ದಾರೆ. ಜುಲೈ 3ರಿಂದ ಚಾತುರ್ಮಾಸ್ಯ ವ್ರತ ಆರಂಭಗೊಂಡು  ಸೆ. 29ರ ವರೆಗೆ ನಡೆಯಲಿದೆ. ಈ ಬಾರಿ ಅಧಿಕ ಮಾಸದ ಹಿನ್ನೆಲೆಯಲ್ಲಿ 60ದಿವಸಗಳ ಬದಲು 84ದಿವಸಗಳ ವ್ರತಾಚರಣೆ ನಡೆಯಲಿದೆ. ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಶ್ರೀಮಠದ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿದ್ದಾರೆ. 

          ಪೂರ್ವಾಶ್ರಮದಲ್ಲಿ ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆಯ ಪೋಷಣೆಯಲ್ಲಿ ಶ್ರೀಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಎಡನೀರು ಮಠ ಗೋಶಾಲೆಯನ್ನು ಹೊಂದಿದ್ದು, 20ಕ್ಕೂ ಹೆಚ್ಚು ಹಸುಗಳು ಇಲ್ಲಿದೆ.  ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಮತ್ತು ಯಕ್ಷಗಾನದಂತಹ ಸಾಂಸ್ಕ್ರøತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ತಮ್ಮ ಮೂರನೇ ವರ್ಷದ ಚಾತುರ್ಮಾಸವನ್ನು ಈ ಬಾರಿಯೂ ಶ್ರೀಮಠದಲ್ಲೇ ನಡೆಸಲಿದ್ದಾರೆ. 

             ಶ್ರೀಮದ್ ಎಡನೀರು ಮಠ ಕಾಸರಗೋಡಿನಿಂದ ಪುತ್ತೂರು ರಸ್ತೆಯಲ್ಲಿ  10ಕಿ.ಮೀ ಹಾಗೂ ಮಂಗಳೂರಿನಿಂದ 60ಕಿ.ಮೀ ದೂರದಲ್ಲಿದೆ. ಸಂಪರ್ಕ ಸಂಖ್ಯೆ-9447089608(ರಾಜೇಂದ್ರ ಕಲ್ಲೂರಾಯ), 9446169314(ರಘು ಎಡನೀರು)

………………………………………………………………………………………………………………………………….


ಚಾತುರ್ಮಾಸ-ಉಪ್ಪಳ ಕೊಂಡೆವೂರು ಮಠ

         ಉಪ್ಪಳ  ಸನಿಹದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ  ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ತಮ್ಮ 19ನೇ ವರ್ಷದ ಚಾತುರ್ಮಾಸ ವ್ರತವನ್ನು ಕೊಂಡೆವೂರು ಆಶ್ರಮದಲ್ಲೇ ಕೈಗೊಳ್ಳಲಿದ್ದಾರೆ. ಆರಂಭದಿಂದಲೂ ಶ್ರೀಮಠದಲ್ಲೇ ಚಾತುರ್ಮಾಸ ವ್ರತ ಕೈಗೊಳ್ಳುತ್ತಿರುವ ಶ್ರೀಗಳು ಈ ಬಾರಿ ಗುರುಪೂರ್ಣಿಮೆ ದಿನವಾದ ಜುಲೈ 3ರಂದು ವ್ರತ ಆರಂಭಿಸಲಿದ್ದಾರೆ. ಅಧಿಕ ಮಾಸದ ಹಿನ್ನೆಲೆಯಲ್ಲಿ ಸೆ. 29ರ ವರೆಗೆ ಶ್ರೀ ಸ್ವಾಮೀಜಿ ವ್ರತಾಚರಣೆಯಲ್ಲಿರಲಿದ್ದಾರೆ. 

            ಶ್ರೀಮಠದಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಂದ ರಾಷ್ಟ್ರಮಟ್ಟದಲ್ಲಿ ಮಠ ಗುರುತಿಸಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಮಹತ್ವದ ಯಜ್ಞ, ಯಾಗಾದಿಗಳನ್ನು ಇಲ್ಲಿ ನಡೆಸಲಾಗಿದೆ. 2013ರಲ್ಲಿ ಸಹಸ್ರ ಚಂಡಿಕಾ ಯಾಗ, ಗಾಯತ್ರೀ ಘೃತ ಸಂಪ್ರಾಪ್ತಿ ಯಾಗ, ಚತುರ್ವೇದ ಸಂಹಿತಾ ಯಾಗ, 2019ರಲ್ಲಿ ವಿಶ್ವಜಿತ್‍ಅತಿರಾತ್ರ ಸೋಮಯಾಗ ನಡೆಸಲಾಗಿತ್ತು. ಶ್ರೀಮಠದ ವಠಾರದಲ್ಲಿ ಅತ್ಯಪೂರ್ವ ಔಷಧೀಯ ಸಸ್ಯಗಳನ್ನು ಒಳಗೊಂಡ ಆಯುರ್ವೇದ ನಕ್ಷತ್ರ ವನವನ್ನು ಪೋಷಿಸಲಾಗುತ್ತಿದೆ. ಶ್ರೀ ಮಠದ ಗೋಶಾಲೆಯಲ್ಲಿ  ಕಾಂಕ್ರೇಜ್, ಗಿರ್, ಕಾಸರಗೋಡು ಗಿಡ್ಡ ತಳಿ ಸೇರಿದಂತೆ ನೂರಕ್ಕೂ ಮಿಕ್ಕಿ ಹಸುಗಳಿವೆ. ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಿಗೆ ಸಾವಯವ ತರಕಾರಿ, ಕೃಷ್ಯುತ್ಪನ್ನಗಳನ್ನು ಶ್ರೀಮಠದ ಜಾಗದಲ್ಲೇ ಬೆಳೆಸಿ ಬಳಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. 

            ಉಪ್ಪಳ ಪೇಟೆಯಿಂದ ಮೀಯಪದವು ರಸ್ತೆಯಲ್ಲಿ ಒಂದುವರೆ ಕಿ.ಮೀ ದೂರದಲ್ಲಿ ಶ್ರೀ ಮಠ ಅಸ್ತಿತ್ವದಲ್ಲಿದೆ. ಮಂಗಳೂರಿನಿಂದ ಇಲ್ಲಿಗೆ 27ಕಿ.ಮೀ ಹಾಗೂ ಕಾಸರಗೋಡಿನಿಂದ 24ಕಿ.ಮೀ ದೂರವಿದೆ. ಸಂಪರ್ಕ ಸಂಖ್ಯೆ:9400744159(ಅನಿಲ್) ಹಾಗೂ 9633952375(ಹರ್ಷ ಕೊಂಡೆವೂರು)



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries