HEALTH TIPS

ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡ ಆಕ್ರಂದನ

               ಲಕ್ಕಾಡ್​: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನಲ್ಲಿ ನಡೆದಿದೆ.

       ಜು.10 ಬೆಳಗ್ಗೆ​ ಪಲಕ್ಕಾಡ್​ನ ಪುದುಸ್ಸೆರಿಯ ಕುರುಡಿಕಾಡ್​ ಎಂಬ ಪ್ರದೇಶದಲ್ಲಿ ಲಾರಿ ಮತ್ತು ಬೈಕ್​ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

                    ಅನಿಶಾ(20) ಮೃತ ದುರ್ದೈವಿ. ಈಕೆ ಪುಥುಕೋಡ್​ನ ಕಣ್ಣನ್ನೂರ್​ ಮೂಲದವಳು. ಕೊಯಮತ್ತೂರು ಮೂಲದ ಆಕೆಯ ಪತಿ ಶಕಿರ್​ (32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

                ಅನಿಶಾ ಮತ್ತು ಶಕೀರ್​ ಕಳೆದ ಜೂನ್​ 4ರಂದು ಮದುವೆಯಾದರು. ಕೇವಲ ಒಂದು ತಿಂಗಳಲ್ಲಿ ಅನಿಶಾ ದಾರುಣ ಸಾವಿಗೀಡಾಗಿದ್ದಾಳೆ. ನೆಮ್ಮಾರ ಕುನಿಸ್ಸೆರಿಯ ಸಂಬಂಧಿಕರ ಮನೆಯಲ್ಲಿ ಹಬ್ಬ ಮುಗಿಸಿಕೊಂಡು ಅನಿಶಾ, ಕೊಯಮತ್ತೂರಿನ ಗಂಡನ ಮನೆಗೆ ಬರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

                   ಅನಿಶಾ ಮತ್ತು ಶಕೀರ್​ ಇದ್ದ ಬೈಕ್​ ಪಲಕ್ಕಾಡ್​ನಿಂದ ಕೊಯಮತ್ತೂರಿಗೆ ತೆರಳಿತ್ತು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಳು. ಬೈಕ್​ ಓಡಿಸುತ್ತಿದ್ದ ಶಕೀರ್​ಗೆ ಗಂಭೀರ ಗಾಯವಾಗಿದೆ. ಕಂಟೈನರ್​ ಓವರ್​ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

                ಪತ್ನಿಯನ್ನು ಕಳೆದುಕೊಂಡ ಶಕೀರ್​ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries