ಕಾಸರಗೋಡು: ದೇಶದ ಪ್ರಮುಖ ಆತಿಥ್ಯ ಬ್ರಾಂಡ್‍ಗಳಲ್ಲಿ ಒಂದಾದ ಲಲಿತ್ ಸೂರಿ ಹಾಸ್ಪಿಟಾಲಿಟಿ ಗ್ರೂಪ್, 2023ನೇ ವರ್ಷವನ್ನು ವಿಶ್ವಸಂಸ್ಥೆಯ ಕಿರು ಧಾನ್ಯ ವರ್ಷವನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಲಲಿತ್ ಗ್ರೂಪ್ ಸಂಸ್ಥೆಗಳಲ್ಲಿ ಕಿರುಧಾನ್ಯ ಮಿಷನ್ ಸಹಯೋಗದೊಂದಿಗೆ "ಶ್ರೀ ಅನ್ನ" ಭಾರತದ ಕಿರುಧಾನ್ಯಗಳ ಪ್ರಚಾರ ಮತ್ತು ಉತ್ಪನ್ನಗಳ ಬಿಡುಗಡೆಯನ್ನು ಜಿಲ್ಲೆಯ ಮೊದಲ ಪಂಚತಾರಾ ರೆಸಾರ್ಟ್ ಲಲಿತ್ ಬೇಕಲ್‍ನಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಬಿ.ಆರ್. ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್, ಲಲಿತ್ ಬೇಕಲ್ ಪ್ರಧಾನ ವ್ಯವಸ್ಥಾಪಕ ಲಲಿತ್ ಮುಂದ್ಕೂರ್, ಗ್ರಾಪಂ ಸದಸ್ಯ ಚಂದ್ರನ್, ಡಾ. ಶ್ರೀಜೇಶ್, ಡಾ. ಮಣಿಕಂಠನ್ ನಂಬಿಯಾರ್ ಭಾಗವಹಿಸಿದ್ದರು. ಜುಲೈ 20 ರಿಂದ ಆಗಸ್ಟ್ 20 ರವರೆಗೆ, ಭಾರತದಾದ್ಯಂತ ಲಲಿತ್ ಗ್ರೂಪ್ ಆಫ್ ಸಂಸ್ಥೆಗಳಲ್ಲಿ ಆರೋಗ್ಯಕರ ಕಿರು ಧಾನ್ಯ ಖಾದ್ಯಗಳನ್ನು ಆನಂದಿಸಲು ಅವಕಾಶವನ್ನು ನೀಡಲಾಗಿದೆ.
ಐಷಾರಾಮಿ ಹೋಟೆಲ್‍ಗಳು ಮತ್ತು ಅಸಾಧಾರಣ ಭೋಜನದ ಅನುಭವಗಳಿಗೆ ಹೆಸರುವಾಸಿಯಾಗಿರುವ ಲಲಿತ್ ಗ್ರೂಪ್ ಭಾರತದಲ್ಲಿ ಹೆಸರಾಂತ ಆತಿಥ್ಯ ಬ್ರಾಂಡ್ ಆಗಿದ್ದು, ಶ್ರೇಷ್ಠತೆ ಮತ್ತು ಸುಸ್ಥಿರತೆಯ ಬದ್ಧತೆಯೊಂದಿಗೆ, ಲಲಿತ್ ಗ್ರೂಪ್ ಭಾರತದ ಶ್ರೀಮಂತ ಸಾಂಸ್ಕøತಿಕ ಮತ್ತು ಪಾಕಶಾಲೆಯ ಪರಂಪರೆಯನ್ನು ಉತ್ತೇಜಿಸುವ ಜತೆಗೆ ಅತಿಥಿಗಳಿಗೆ ಮರೆಯಲಾಗದ ಅನುಭವಗಳನ್ನು ಒದಗಿಸುವ ಗುರಿಯನ್ನು ಹೊಂದಿರುವುದಾಗಿ ಲಲಿತ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಲಲಿತ್ ಮುಂದ್ಕೂರ್ ತಿಳಿಸಿದ್ದಾರೆ.