ಕುಂಬಳೆ: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು ಇದರ ಸಂಸ್ಥಾಪಕ ಮೊಗ್ರಾಲ್ ಶ್ರೀನಿವಾಸರಾಯರ ಪುತ್ಥಳಿ ಅನಾವರಣ ಹಾಗೂ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮ ಜು.3ರಂದು ಬೆಳಿಗ್ಗೆ 10 ಕ್ಕೆ ಶಾಲೆಯ ಅಮೃತಶ್ರೀ ಸಭಾಂಗಣದಲ್ಲಿ ಜರಗಲಿದೆ. ಇದರ ಅಂಗವಾಗಿ ಜರಗುವ ಸಭಾ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ಗಣೇಶ್ ರಾವ್ ಸಭೆಯ ಅಧ್ಯಕ್ಷತೆ ವಹಿಸುವರು. ಮುಂಬೈಯ ಖ್ಯಾತ ಉದ್ಯಮಿ ಕೃಷ್ಣ ಪ್ರಸಾದ್ ರೈ ಕುತ್ತಿಕ್ಕಾರು ದೀಪ ಪ್ರಜ್ವಲನೆಗೈಯುವರು. ಶಾಲಾ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಕೆ‹ಶೆಟ್ಟಿ ಮೊಗ್ರಾಲ್ ಶ್ರೀನಿವಾಸರಾಯರ ಪುತ್ಥಳಿಯನ್ನು ಅನಾವರಣಗೊಳಿಸುವರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ವಲಯ ಯೋಜನಾಧಿಕಾರಿ ಮುಖೇಶ್ ಮುಖ್ಯ ಅತಿಥಿಗಳಾಗಿರುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಎಂ. ಶಶಿಧರ ಪ್ರತಿಭಾ ಪುರಸ್ಕಾರ ವಿತರಣೆಗೈಯುವರು. ಕುಂಬಳೆ ಗ್ರಾ.ಪಂ.ಸದಸ್ಯೆ ಪುμÁ್ಪಲತಾ ಪಿ.ಶೆಟ್ಟಿ, ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಶಿವರಾಮ ಭಟ್, ಪಿಟಿಎ ಅಧ್ಯಕ್ಷ ವಸಂತ ಚೂರಿತ್ತಡ್ಕ, ಕುಂಬಳೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ, ಕ್ಯಾಂಪ್ಕೋ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕುಂಬಳೆ ಗ್ರಾ.ಪಂ. ಮಾಜಿ ಸದಸ್ಯ ಸುಕೇಶ್ ಭಂಡಾರಿ, ಕುಂಬಳೆ ಗ್ರಾ.ಪಂ.ಸದಸ್ಯ ರವಿರಾಜ್ ಕುಂಟಗೇರಡ್ಕ, ಪುತ್ತಿಗೆ ಗ್ರಾ.ಪಂ.ಸದಸ್ಯೆ ಜಯಂತಿ, ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ, ಸಾಹಿತಿ ಶ್ರೀನಿವಾಸ್ ಆಳ್ವ ಕಳತ್ತೂರು, ಮಾತೃಸಂಘದ ಆಧ್ಯಕ್ಷೆ ಶ್ರೀಲತಾ ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗಾ ಮೊದಲಾದವರು ಭಾಗವಹಿಸುವರು.