ಕಾಸರಗೋಡು: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್‍ನಲ್ಲಿ ಜುಲೈ 23 ರಂದು ಬೆಳಗ್ಗೆ 9 ರಿಂದ ಬಿ.ಎಸ್.ಎಸ್. ಅಭÀಯನಿಕೇತನದ ಸಂಸ್ಥಾಪಕ ದಿ.ಪಿ.ಪಾಂಡುರಂಗ ರಾವ್ ಅವರ ಜನ್ಮಶತಮಾನೋತ್ಸವ ಸಮಾರಂಭ ವಿವಿಧÀ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 5.30 ಕ್ಕೆ ಓಂಕಾರ ಸುಪ್ರಭಾತ, 9 ರಿಂದ ಕಾಸರಗೋಡು ಜಿಲ್ಲೆಯ ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಂಗಳಾರತಿ, 1.30 ಕ್ಕೆ ಭೋಜನ, ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಚಿನ್ಮಯ ಮಿಷನ್ ರೀಜನ್ ಮುಖ್ಯಸ್ಥ ಪೂಜ್ಯ ಶ್ರೀ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಬಿಎಸ್‍ಎಸ್ ಅಭಯನಿಕೇತನ್‍ನ ಅಧ್ಯಕ್ಷ ಡಾ.ಎಸ್.ಬಿ.ಖಂಡಿಗೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಿಕಟ ಪೂರ್ವಾಧ್ಯಕ್ಷ ಎಂ.ನಾರಾಯಣ ಭಟ್, ಕಾಸರಗೋಡು ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಎಚ್.ಮಹಾಲಿಂಗ ಭಟ್, ಜಿಲ್ಲಾ ಉಪಾಧ್ಯಕ್ಷ ಸಿ.ರಾಮಚಂದ್ರ, ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟರಮಣ ಭಾಗವಹಿಸುವರು. ಸುಮಾ ಖಂಡಿಗೆ ಬೆಂಗಳೂರು ಮತ್ತು ಸಾಯಿ ಅರವಿಂದ್ ಕಾಸರಗೋಡು ಸವಿನೆನಪು ಪ್ರಸ್ತುತ ಪಡಿಸಲಿರುವರು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಕನ್ನಡಕ, ಹೊಲಿಗೆ ಯಂತ್ರ, ಗಾಲಿಕುರ್ಚಿ, ವಿದ್ಯಾಭ್ಯಾಸ ನೆರವು ವಿತರಿಸುವರು. ಜೊತೆ ಕಾರ್ಯದರ್ಶಿ ಸಿ.ಎನ್.ರಾಮಕೃಷ್ಣ ಹಾಗು ಜತೆ ಕಾರ್ಯದರ್ಶಿ ಬಿ.ಪ್ರೇಂ ಪ್ರಕಾಶ್ ಉಪಸ್ಥಿತರಿರುವರು.