ಇಂಪಾಲ: ಎರಡು ಬುಡಕಟ್ಟು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರದಿಂದ ಮುಚ್ಚಿದ್ದ ಶಾಲೆಗಳನ್ನು ಬುಧವಾರ ಆರಂಭ ಮಾಡಲಾಗಿದೆ.
ಇಂಪಾಲ: ಎರಡು ಬುಡಕಟ್ಟು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರದಿಂದ ಮುಚ್ಚಿದ್ದ ಶಾಲೆಗಳನ್ನು ಬುಧವಾರ ಆರಂಭ ಮಾಡಲಾಗಿದೆ.
ಕಳೆದ ಎರಡು ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇಂದಿನಿಂದ ಶಾಲೆಗಳು ಆರಂಭವಾಗಿದ್ದು ಕೆಲವೇ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದರು.
ಶಾಲೆಗಳನ್ನು ಪುನಾರಂಭಮಾಡಿರುವುದನ್ನು ಪೋಷಕರು, ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.
ಕಳೆದ ಸೋಮವಾರ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಬುಧವಾರದಿಂದ (ಜು.5) 8ನೇ ತರಗತಿವರೆಗೂ ಶಾಲೆಗಳನ್ನು ಆರಂಭ ಮಾಡಲಾಗುವುದು ಎಂದು ಹೇಳಿದ್ದರು.
ಮಣಿಪುರದಲ್ಲಿ ಮೇ 3ರಂದು ಮೇತಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಆರಂಭವಾಗಿತ್ತು. ಹಿಂಸಾಚಾರ ಕೃತ್ಯಗಳಿಗೆ ಸಂಬಂಧಿಸಿದಂತೆ ಇದುವರೆಗೂ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.