ತಿರುವನಂತಪುರಂ: ಹಿಂದೂ ನಂಬಿಕೆಗಳನ್ನು ಅವಮಾನಿಸುವಂತಹ ವಿವಾದಾತ್ಮಕ ಹೇಳಿಕೆ ನೀಡಿರುವ ಸ್ಪೀಕರ್ ಎಎನ್ ಶಂಸೀರ್ ವಿರುದ್ಧ ಪ್ರತಿಭಟನೆಗಳು ಕಾವು ಪಡೆದುಕೊಂಡಿವೆ.
ಸ್ಪೀಕರ್ ಹೇಳಿಕೆಗೆ ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಸಾಂವಿಧಾನಿಕ ಸ್ಥಾನದಲ್ಲಿರುವ ಶಂಸೀರ್ ಹಿಂದೂ ಧರ್ಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಹಿಂದೂಗಳ ಆರಾಧ್ಯ ದೈವ ಗಣೇಶನನ್ನು ಅವಮಾನಿಸಿ ಭಾಷಣ ಮಾಡಿದ ಸ್ಪೀಕರ್ ಎಎನ್ ಶಂಸೀರ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಗಣಪತಿಯು ಮಿಥ್ಯೆಯಾಗಿದ್ದು, ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು ಎಂಬುದು ಉಪನ್ಯಾಸ ನೀಡಿದ್ದರು.
ಶಂಸೀರ್ ಹೇಳಿಕೆಯನ್ನು ವಿರೋಧಿಸಿ ಕೇರಳ ದೇಗುಲ ಸಂರಕ್ಷಣಾ ಸಮಿತಿ ಸೆಕ್ರೆಟರಿಯೇಟ್‍ಗೆ ಮೆರವಣಿಗೆ ನಡೆಸಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಶಂಸೀರ್ ಕ್ಷಮೆಯಾಚಿಸಬೇಕು ಮತ್ತು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇರಳ ದೇವಾಲಯ ಸಂರಕ್ಷಣಾ ಸಮಿತಿಯ ಮೆರವಣಿಗೆ ಒತ್ತಾಯಿಸಿದೆ. ಪಜವಂಗಡಿ ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯನ್ನು ದೇವಸ್ಥಾನ ಸಂರಕ್ಷಣಾ ಸಮಿತಿಯ ಧರ್ಮದರ್ಶಿ ಸ್ವಾಮಿ ಅಯ್ಯಪ್ಪದಾಸ್ ಉದ್ಘಾಟಿಸಿದರು.
ಶಂಸೀರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ತಂತ್ರಿ ಪ್ರಚಾರ ಸಭೆಯೂ ಮುಂದಾಯಿತು. ಸ್ಪೀಕರ್ ರಾಜೀನಾಮೆಗೆ ಆಗ್ರಹಿಸಿ ಅಖಿಲ ತಂತ್ರಿ ಪ್ರಚಾರಕ ಸಭೆ ರಾಜ್ಯಪಾಲರಿಗೆ ದೂರು ಸಲ್ಲಿಸಿತು. ಶಂಸೀರ್ ಸಾಂವಿಧಾನಿಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಖಿಲ ತಂತ್ರಿ ಪ್ರಚಾರಕ ಸಭೆ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಶಂಸೀರ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.