ಕೊಚ್ಚಿ: ತನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದ ಕೇರಳದ ವಾತಾವರಣದಿಂದ ಹೊರಗುಳಿಯಲು ಬಯಸಿ ಹೊರಬಂದಿದ್ದೇನೆ ಎಂದು ವಿವಾದಿತ ಆಕ್ಟಿವಿಸ್ಟ್ ಬಿಂದು ಅಮ್ಮಿಣಿ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಂದು ಅಮ್ಮಿಣಿ ಅವರು ಕಮ್ಯುನಿಸ್ಟರು ಮತ್ತು ಪಕ್ಷದ ಕಾರ್ಯಕರ್ತರು ಕೂಡಾ ತನ್ನನ್ನು ಅಸ್ಪೃಶ್ಯರಾಗಿ ಕಂಡರೆಂದು ಹೇಳಿದ್ದಾರೆ.
ಸಾಮಾಜಿಕ ಸಂವಹನಗಳು ನಡೆಯಬಹುದಾದ ಸ್ಥಳವು ಮುಖ್ಯವಾಗಿದೆ. ನಾನು ಯಾವುದಾದರೂ ವಿದೇಶಕ್ಕೆ ಹೋಗಬೇಕೆಂದು ಬಯಸಿದ್ದೆ. ವಿಶೇಷವಾಗಿ ಆಫ್ರಿಕನ್ ದೇಶಗಳಿಗೆ. ಆದರೆ ನನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಸರಿಯಾದ ಸ್ಥಳದ ಬಗ್ಗೆ ನಿಖರತೆ ಇದ್ದಿರಲಿಲ್ಲ. ಭಾಷೆ ಸರಿಯಾಗಿ ಗೊತ್ತಿಲ್ಲದಿದ್ದರೂ ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಜನರು ತಮ್ಮ ಬಳಿ ಸಮಸ್ಯೆಗಳೊಂದಿಗೆ ಬರುತ್ತಾರೆ ಎಂದು ಬಿಂದು ಅಮ್ಮಿಣಿ ಹೇಳುತ್ತಾರೆ. ಕೇರಳದಲ್ಲಿ ಬೆಂಬಲ ಸಿಗಲಿಲ್ಲವμÉ್ಟೀ ಅಲ್ಲ, ಹಲವು ಕಡೆಯಿಂದ ಒಂದು ರೀತಿಯ ಬಹಿಷ್ಕಾರವೂ ನಡೆದಿತ್ತು ಎಂದಿರುವರು.
ಕೇರಳದಲ್ಲಿ ಬಿಂದು ಅಮ್ಮಿಣಿಗೆ ಬೆಂಬಲ ನೀಡಿ ಮತ ಕಳೆದುಕೊಳ್ಳುವ ಆತಂಕ ಹೆಚ್ಚುತ್ತಿರುವುದನ್ನು ಕಂಡು ಎಡಪಕ್ಷ ಬೆದರಿದೆ. ಖಾಸಗಿಯಾಗಿ ಬೆಂಬಲವನ್ನು ಪ್ರತಿಪಾದಿಸುವ ಮತ್ತು ಸಾರ್ವಜನಿಕವಾಗಿ ಅದನ್ನು ನಿರಾಕರಿಸುವವರನ್ನು ಧಿಕ್ಕರಿಸಲಾಗುತ್ತದೆ. ನನ್ನದು ಎಂದು ಹೇಳಿಕೊಂಡು ಅಶ್ಲೀಲ ವೀಡಿಯೋ ಪ್ರಸಾರವಾದಾಗಲೂ ಅವರು ಅದರ ವಿರುದ್ಧ ಏನನ್ನೂ ಮಾಡಿಲ್ಲ. ಆರೋಪಿಗಳು ಪತ್ತೆಯಾಗದಿರುವುದು ಬಿಟ್ಟರೆ, ಇದು ನನ್ನದಲ್ಲ ಎಂದು ಹೇಳಲು ಪೋಲೀಸರಿಂದ ವರದಿಯೂ ಬಂದಿಲ್ಲ. ಇದು ನನಗೆ ಹೆಚ್ಚು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಿದ ಘಟನೆಗಳಲ್ಲಿ ಒಂದಾಗಿದೆ ಎಂದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.