ನವದೆಹಲಿ (PTI): ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿ ವೃಥಾ ಕಾಲಹರಣ ಮಾಡುವ ಬದಲಿಗೆ ವಿದ್ಯಾಭ್ಯಾಸದತ್ತ ಗಮನ ಕೇಂದ್ರೀಕರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕಾನೂನು ವಿದ್ಯಾರ್ಥಿಗೆ ಕಿವಿ ಮಾತು ಹೇಳಿದೆ.
ನವದೆಹಲಿ (PTI): ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿ ವೃಥಾ ಕಾಲಹರಣ ಮಾಡುವ ಬದಲಿಗೆ ವಿದ್ಯಾಭ್ಯಾಸದತ್ತ ಗಮನ ಕೇಂದ್ರೀಕರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕಾನೂನು ವಿದ್ಯಾರ್ಥಿಗೆ ಕಿವಿ ಮಾತು ಹೇಳಿದೆ.
ಸಂವಿಧಾನದಲ್ಲಿ ನಿಬಂಧನೆಗಳಿಗೆ ಒಳಪಟ್ಟು ಲಿಂಗ ತಟಸ್ಥ ಪದಗಳನ್ನು ಬಳಸಲಾಗುತ್ತಿದೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ವಿಭಾಗೀಯ ಪೀಠವು, 'ಕಾನೂನು ಶಾಲೆಯಲ್ಲಿ ಅಧ್ಯಯನ ಮಾಡುವ ಬದಲು ವಿನಾಕಾರಣ ಇಂತಹ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಅಗತ್ಯ ನಿಮಗಿದೆಯೇ?' ಎಂದು ಪ್ರಶ್ನಿಸಿತು.
ಮಹಿಳೆ ಕೂಡ ಸಾಂವಿಧಾನಿಕವಾಗಿ ಅಧ್ಯಕ್ಷ ಸ್ಥಾನಕ್ಕೇರಬಹುದು. ಆಗ ಲಿಂಗ ಆಧರಿಸಿ ಅಧ್ಯಕ್ಷ ಸ್ಥಾನವನ್ನು ಸಂಬೋಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.