ಬದಿಯಡ್ಕ: ಗುರುಪೂರ್ಣಿಮೆ ಕಾರ್ಯಕ್ರಮ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ಟರ ನಿವಾಸದಲ್ಲಿ ಜರಗಿತು. ಈ ಸಂದಭರ್Àದಲ್ಲಿ ಮೂವರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಬೇಳ ಕೊಳಂಬೆಯ ವಸಂತಿ ಎಂಬವರಿಗೆ ಮನೆದುರಸ್ತಿಗೆ ಹತ್ತುಸಾವಿರ ರೂ, ಝುಹಾರತ್ ಮಜೀದಾ ಎಂಬಾಕೆಗೆ ವಿದ್ಯಾಭ್ಯಾಸಕ್ಕೆ ಐದು ಸಾವಿರ ರೂ ಧನಸಹಾಯ ನೀಡಲಾಯಿತು.
ಸಾಯಿರಾಂ ಕೃಷ್ಣ ಭಟ್, ಬದಿಯಡ್ಕ ಪೊಲೀಸ್ ಠಾಣಾಕಾರಿ ವಿನೋದ್ ಕುಮಾರ್, ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸದಸ್ಯರುಗಳಾದ ಡಿ.ಶಂಕರ ಹಾಗೂ ಜಯಶ್ರೀ, ರಘುನಾಥ ಪೈ ಕುಂಬಳೆ, ಜಗಜೀವನ್‍ದಾಸ್ ಬೆಳ್ಳೂರು, ವೇಣುಗೋಪಾಲ ಕೆ.ಎನ್., ಸಂಜೀವ ರೈ, ವೆಂಕಟೇಶ ಶೆಣೈ, ಹೊಲಿಗೆ ಯಂತ್ರದ ಫಲಾನುಭವಿಗಳಾದ ಶ್ವೇತಾಲಕ್ಷ್ಮೀ ದರ್ಭೆತ್ತಡ್ಕ, ಗೀತಾ ಚೌಕಾರು ಬೇಳ, ತೇಜಸ್ವಿ ಮಾಯಿಪ್ಪಾಡಿ ಪಾಲ್ಗೊಂಡಿದ್ದರು.