ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ನೂತನ ಜಿಲ್ಲಾ ಕುಲಾಲ ಸಮಾಜ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜುಲೈ 16 ಭಾನುವಾರ ಬೆಳಗ್ಗೆ 10.25ರ ಸೂಮುಹೂರ್ತದಲ್ಲಿ ಸಂಘದ ನೂತನ ನಿವೇಶನ ತೂಮಿನಾಡು, ಕುಂಜತ್ತೂರುನಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜಿಲ್ಲಾ ಸಂಘ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ. ರವೀಂದ್ರ ಮುನ್ನಿಪ್ಪಾಡಿ ಹಾಗೂ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಕುಂಜತ್ತೂರು ಗೋಪಾಲ ಸಾಲ್ಯಾನ್ ರವರ ನಿವಾಸದಲ್ಲಿ ನಡೆಯಿತು.