ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ಜುಲೈ 23ರಂದು ಬೆಳಿಗ್ಗೆ 10ಕ್ಕೆ ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮ ವತಿಯಿಂದ ಅರ್ಹ ಯುವಕರಿಗೆ 'ಅರ್ಪಣಾ'ವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20ನೇ ಚಾತುರ್ಮಾಸ್ಯ ವ್ರತಾಚರಣೆಯ ಈಶುಭ ಸಂದರ್ಭದಲ್ಲಿ ನಡೆಯುವಕಾರ್ಯಕ್ರಮದಲ್ಲಿಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷರಾದಪರಮಪೂಜ್ಯ ಸ್ವಾಮೀ ಜಿತಕಾಮಾನಂದಜೀಯವರುಉಪಸ್ಥಿತರಿದ್ದು ಉಚಿತ ವಸ್ತ್ರ ವಿತರಣೆ ಕಾರ್ಯಕ್ರಮಉದ್ಘಾಟಿಸಲಿದ್ದಾರೆ. ಅವರು zsರ್ಮಿಕ ವಿಷಯದ ಬಗ್ಗೆಸತ್ಸಂಗವನ್ನೂ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 9.00 ರಿಂದಫಲಾನುಭವಿಗಳ ನೋಂದಣೆ ಆರಂಭವಾಗಲಿದ್ದು , ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗಪಡಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.