ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ. ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈ 23ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶನಿವಾರ ಬೆಳಗ್ಗೆ ಕುಂಬಳೆ ಅಸುಪಾಸು ಬೀಸಿದ ಬಿರುಸಿನ ಗಾಳಿ, ಮಳೆಗೆ ಮಾವಿನಕಟ್ಗಟೆ ಸನಿಹ ಐದು ಮನೆಗಳಿಗೆ ಹಾನಿಯುಂಟಗಿದೆ. ಬಾಳೆಗಿಡ ನೆಲಕಚ್ಚಿದ್ದು, ವಿವಿಧ ಮರಗಳು ಧರಾಶಾಯಿಯಾಗಿದೆ.ಮಾವಿನಕಟ್ಟೆ ನಿವಾಸಿಗಳಾದ ರಾವುಫ್ ಹಾಗೂ ಅಬ್ದುಲ್ಲ ಎಂಬವರ ಮನೆಯ ಹೆಂಚು ಗಾಳಿಗೆ ಹಾರಿಹೋಗಿ ಮನೆಗೆ ಹಾನಿಯುಂಟಗಿದೆ.ಹಮೀದ್ ಹಗೂ ನರೇನಾ ಎಂಬವರ ಮನೆ ಆವರಣಗೋಡೆ ಕುಸಿದು ಬಿದ್ದಿದೆ. ಅಬೂಬಕ್ಕರ್ ಎಂಬವರ ಮನೆಯ ಸ್ಟೇರ್‍ಕೇಸ್ ಶೀಟ್‍ಗಳು ಗಾಳಿಗೆ ಹಾರಿಬಿದ್ದು, ಹಾನಿಯುಂಟಾಗಿದೆ.ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ಉಪ್ಪಳ ಕುಬಣೂರು ದೀನಾರ್‍ನಗರದಲ್ಲಿ ಬೃಹತ್‍ಮರ ರಸ್ತೆಗುರುಳಿ ಸಂಚಾರPಕ್ಕೆ ತಡೆಯುಂಟಾಗಿತ್ತು. ಅಂಬಾರು ನಿವಾಸಿ ಮೊಯ್ದೀನ್ ಎಂಬವರ ಕಾಂಕ್ರೀಟ್ ಮನೆಗೆ ಮರಉರುಳಿ ಮನೆಗೆ ಹಾನಿಯುಂಟಾಗಿದೆ. ಪ್ರತಾಪನಗರದಲ್ಲೂ ಮರಗಳು ಉರುಳಿಬಿದ್ದು, ಸಂಚಾರಕ್ಕೆ ತಡೆಯುಂಟಗಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆಯಿಂದ ಸಂಚಾರ ಸುಗಮಗೊಳಿಸಲಗಿದೆ.
ಮಲೆನಾಡು ಪ್ರದೇಶದಲ್ಲೂ ಬಿರುಸಿನ ಮಳೆಯಾಗುತ್ತಿದ್ದು, ವಿವಿಧೆಡೆ ಭೂಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಹಾನಿಯುಂಟಾಗಿದೆ. ಪಾಣತ್ತೂರು ಸನಿಹ ಕಲ್ಲಪಳ್ಳಿಯಲ್ಲಿ ಮತ್ತೆ ಭೂಕುಸಿತವುಂಟಾಗಿದೆ. ಈ ಪ್ರದೇಶದಲ್ಲಿ ಸಮಗ್ರ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಜಿಯೋಲಜಿಸ್ಟ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶಿಸಿದ್ದಾರೆ.