ತಿರುವನಂತಪುರಂ: ಮುಖ್ಯಮಂತ್ರಿಗಳ ಪರಿಹಾರ ನಿಧಿ ದುರ್ಬಳಕೆ ಪ್ರಕರಣದ ದೂರುದಾರ ಆರ್‍ಎಸ್ ಶಶಿಕುಮಾರ್ ಅವರನ್ನು ಲೋಕಾಯುಕ್ತರು ಟೀಕಿಸಿ ಲೇವಡಿ ಮಾಡಿದ್ದಾರೆ. ಇವನು ನಮ್ಮಿಂದ ಆದಷ್ಟು ಬೇಗ ದೂರ ಹೋದರೆ ಎμÉ್ಟೂಂದು ಸಂತೋಷ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳಿದರು.
ಪ್ರಕರಣವನ್ನು ಮುಂದೂಡುವಂತೆ ದೂರುದಾರರ ಮನವಿಯನ್ನು ಪರಿಗಣಿಸುವಾಗ ಲೋಕಾಯುಕ್ತರ ಈ ಟೀಕೆ ವ್ಯಕ್ತವಾಯಿತು.
ಪ್ರಕರಣವನ್ನು ಮುಂದೂಡುವಂತೆ ಕೇಳುವುದು ಯಾವಾಗಲೂ ಒಳ್ಳೆಯದು. ಲೋಕಾಯುಕ್ತ ಪತ್ರಿಕೆಯಲ್ಲಿ ಆಗೊಮ್ಮೆ ಈಗೊಮ್ಮೆ ಸುದ್ದಿ ಬರುತ್ತದೆ ಎಂದು ಲೇವಡಿ ಮಾಡಿದರು. ಅವರಿಗೇಕೆ ಈ ರೀತಿ ತೊಂದರೆ? ಒಂದೋ ಹೈಕೋರ್ಟ್‍ನಿಂದ ತಡೆಯಾಜ್ಞೆ ಪಡೆಯಲಿ ಎಂದ ಲೋಕಾಯುಕ್ತರು, ಇದಕ್ಕಾಗಿ ಪೂರ್ಣ ಪೀಠ ಎಷ್ಟು ದಿನ ಸಭೆ ನಡೆಸುತ್ತಿದೆ ಎಂದು ಕೇಳಿದರು.
ಪ್ರಕರಣದ ವಿಚಾರಣೆಯನ್ನು ಇದೇ ತಿಂಗಳ 20ಕ್ಕೆ ಮುಂದೂಡಲಾಗಿದೆ. ಪ್ರಕರಣವನ್ನು ಲೋಕಾಯುಕ್ತ ಪೂರ್ಣ ಪೀಠಕ್ಕೆ ಬಿಟ್ಟಿರುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಆರ್.ಎಸ್.ಶಶಿಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ಬಾಕಿ ಇರುವ ಕಾರಣ ಪ್ರಕರಣದ ವಿಚಾರಣೆ ಮುಂದೂಡುವಂತೆ ಲೋಕಾಯುಕ್ತದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ನ್ಯಾಯಮೂರ್ತಿ ಹರೂನ್ ಅಲ್ ರಶೀದ್ ಮತ್ತು ನ್ಯಾಯಮೂರ್ತಿ ಬಾಬು ಮ್ಯಾಥ್ಯೂ ಪಿ.ಜೋಸೆಫ್ ಅವರನ್ನೊಳಗೊಂಡ ಪೂರ್ಣ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.