ಮಾನ್ಸೂನ್ ಅಥವಾ ಮಳೆಗಾಲ ಚೆನ್ನಾಗಿರುವ ಋತುಮಾನ. ಮಳೆಗಾಲದ ತಂಪಾದ ವಾತಾವರಣವನ್ನು ಇಷ್ಟಪಡದೇ ಇರುವವರೂ ಯಾರೂ ಇಲ್ಲ. ಆದರೆ ಮಳೆಗಾಲದಲ್ಲಿ ಆರೋಗ್ಯದ ವಿಚಾರಕ್ಕೆ ಬಂದರೆ ತುಸು ಚಿಂತೆ ಮಾಡಲೇಬೇಕು. ಯಾಕೆಂದರೆ ಮಳೆಗಾಲ ಕೆಲವೊಮ್ಮೆ ಸಾಕಷ್ಟು ರೋಗಗಳಿಗೆ ಕಾರಣವಾಗಬಹುದು.
ಸೋಂಕು, ಚರ್ಮದ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚು. ಯಾಕೆಂದರೆ ತಂಪಾಗಿರುವ ವಾತಾವರಣದಲ್ಲಿ ಬ್ಯಾಕ್ಟೀರಿಯಾ, ಶಿಲೀಂದ್ರ ಸೂಕ್ಷ್ಮ ಜೀವಿಗಳು ಬೆಳವಣಿಗೆಯಾಗುತ್ತವೆ. ಇದು ನೇರವಾಗಿ ನಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಈ ಸಂದರ್ಭದಲ್ಲಿ ಯಾವುದೇ ಸೋಂಕು ತಗುಲದಂತೆ ಮದುಮಿಗಳು ಹೆಚ್ಚಿನ ಕೇರ್ ತೆಗೆದುಕೊಳ್ಳಲೇಬೇಕು.ಮಧುಮೇಹಿಗಳಿಗೆ ಬರಬಹುದು ಸೋಂಕು
ಮಳೆಗಾಲದಲ್ಲಿ ಭೂಮಿಯೂ ಶುಷ್ಕವಾಗಿರುವುದಿಲ್ಲ. ನೆಲ ಸಂಪೂರ್ಣ ತೇವಗೊಂಡಿರುತ್ತದೆ. ಇನ್ನು ಮಳೆಯ ನೀರು ಹರಿದು ಹೋಗದೆ ಅಲ್ಲಲ್ಲಿ ನಿಂತು ಅಲ್ಲಿಯೇ ಬ್ಯಾಕ್ಟೀರಿಯಾಗಳು ಬೆಳೆದು ಸಾಕಷ್ಟು ಖಾಯಿಲೆಗಳಿಗೆ ಕಾರಣವಾಗಬಹುದು. ಮಲೇರಿಯಾ, ವೈರಲ್ ಫೀವರ್ ಮಾತ್ರವಲ್ಲದೇ ಚರ್ಮದ ವ್ಯಾಧಿ ಕೂಡ ಬಾಧಿಸಬಹುದು. ಹಾಗಾಗಿ ಈ ಸಮಯದಲ್ಲಿ ಕಾಳಜಿ ಮಾಡುವುದು ಬಹಳ ಮುಖ್ಯ..
ಮಧುಮೇಹಿಗಳಲ್ಲಿ ಈ ಸಮಸ್ಯೆ ಕಾಡಬಹುದು. ದೇಹದಲ್ಲಿ ರಕ್ತ ಸಕ್ಕರೆ ಮಟ್ಟ ಅಧಿಕವಾಗಿದ್ದರೆ ಚರ್ಮದ ಸಮಸ್ಯೆ ಅಥವಾ ಸೋಂಕು ಉಂಟಾಗಬಹುದು. ಡ್ರೈ ಅಥವಾ ಶುಷ್ಟವಾಗಿರುವ ಚರ್ಮ ಶಿಲೀಂಧ್ರದ ಸೋಂಕಿಗೆ ಒಳಗಾಗಿ ತುರಿಕೆ, ಗಾಯ ಮೊದಲಾದ ಸಮಸ್ಯೆಗಳು ಕಾಣಿಸಬಹುದು. ರಕ್ತ ಪರಿಚಲನೆ ಕಡಿಮೆಯಾದರೆ ಕಾಲಜಿನ್ ನ್ನು ಹಾನಿಗೊಳಿಸುತ್ತದೆ ಇದು ಸಂಪೂರ್ಣವಾಗಿ ಚರ್ಮದಲ್ಲಿ ಆಗಿರುವ ಗಾಯ ಅಥವಾ ಸೋಂಕು ಬೇಗ ಗುಣವಾಗದಂತೆ ತಡೆಯುತ್ತದೆ.
ಮಳೆಗಾಲದಲ್ಲಿ ಶಿಲೀಂಧ್ರಗಳು ಬ್ಯಾಕ್ಟೀರಿಯಾ ಗಳು ಹೆಚ್ಚು ಬೆಳೆಯುತ್ತವೆ. ಮನೆಯ ಹೊರಗೂ ಒಳಗೂ ಈ ಶಿಲೀಂದ್ರ ಅಥವಾ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣುಗಳು ನಮ್ಮ ಚರ್ಮದ ಮೇಲೆ ಸೋಂಕು ತರಬಹುದು. ಅದರಲ್ಲೂ ಮಧುಮೇಹಿಗಳಿಗೆ ಚರ್ಮದಲ್ಲಿ ಸೋಂಕು ಕಾಣಿಸಿಕೊಂಡರೆ ಚರ್ಮದ ದದ್ದುಗಳು ತುರಿಕೆ, ಎಸ್ಜಿಮಾ, ಸಾಂಕ್ರಾಮಿಕ ವಲ್ಲದ ಚರ್ಮರೋಗ ಮೊದಲ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಳೆಗಾಲದಲ್ಲಿ ಅದರಲ್ಲೂ ಮಧುಮೇಹಿಗಳು ತಮ್ಮ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ.
ಮಳೆಗಾಲದಲ್ಲಿ ಸೋಂಕು ಉಂಟಾಗದಂತೆ ಕಾಳಜಿ ಮಾಡುವುದು ಹೇಗೆ?
- ಚರ್ಮದ ರೋಗ ಅಥವಾ ಚರ್ಮದ ಸಮಸ್ಯೆ ಉಂಟಾಗದಂತೆ ತಡೆಗಟ್ಟಲು ಮೊಟ್ಟಮೊದಲನೆಯದಾಗಿ ಮಾಡಬೇಕಾಗಿರುವ ಕೆಲಸ ಎಂದರೆ ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸಬಾರದು. ಒಣಗಿದ ಬಟ್ಟೆಯನ್ನು ಧರಿಸಬೇಕು. ಬಿಸಿ ಮತ್ತು ಮಸಾಲೆ ಹಾಕಿರುವಂತಹ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು. ಅದರ ಬದಲು ಚರ್ಮದ ಆರೋಗ್ಯವನ್ನು ಕಾಪಾಡುವಂತಹ ಹಣ್ಣುಗಳ ಸೇವನೆ ಒಳ್ಳೆಯದು.
- ಇನ್ನು ನಿಮ್ಮ ದೇಹದ ಹಾಗೂ ಸುತ್ತಲಿನ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ನಿಮ್ಮ ಬಟ್ಟೆಗಳನ್ನ ಹಾಗೂ ಒಳ ಉಡುಪುಗಳನ್ನ ಆದಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಿ. ಜೊತೆಗೆ ಸರಿಯಾಗಿ ಒಣಗಿದ ಹತ್ತಿ ಬಟ್ಟೆಗಳನ್ನೇ ಬಳಸಿ.
- ಹೊರಗೆ ಹೋಗುವಾಗ ಮಳೆ ಇರಲಿ ಇಲ್ಲದೆ ಇರಲಿ ನಿಮ್ಮ ಜೊತೆಗೆ ರೈನ್ ಕೋಟ್ ಅಥವಾ ಛತ್ರಿ ಇಟ್ಟುಕೊಳ್ಳಿ. ಏಕೆಂದರೆ ಯಾವ ಸಂದರ್ಭದಲ್ಲಿ ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹೀಗೆ ಅನಿರ್ಧಿಷ್ಟಾವಧಿಗೆ ಮಳೆ ಬಂದರೆ ನಿಮ್ಮ ಬಳಿ ಛತ್ರಿ ಅಥವಾ ರೈನ್ ಕೋಟ್ ಇದ್ದರೆ ಮನೆಯಲ್ಲಿ ನೆನೆಯುವ ಅಗತ್ಯ ಇರುವುದಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಊಹಿಸುವುದೂ ಕಷ್ಟ. ಇಂತಹ ಸಂದರ್ಭದಲ್ಲಿ ಮುಂಜಾಗೃತೆ ವಹಿಸುವುದು ಬಹಳ ಮುಖ್ಯ. ಈ ವಿಚಾರದಲ್ಲಿ ನೀವು ಎಚ್ಚರದಿಂದ ಇದ್ದರೆ ಯಾವ ಚರ್ಮದ ಸೋಂಕು ಕೂಡ ನಿಮ್ಮನ್ನು ಭಾದಿಸುವುದಿಲ್ಲ.
- ಇನ್ನು ಮಳೆಗಾಲದಲ್ಲಿ ಉಂಟಾಗುವ ಚರ್ಮದ ಸೋಂಕುಗಳನ್ನು ತಡೆಗಟ್ಟಲು ಉತ್ತಮವಾದ ಆಹಾರವನ್ನು ಸೇವಿಸಬೇಕು. ಬಾದಾಮಿ, ಬೆಳ್ಳುಳ್ಳಿ, ಬ್ರೌನ್ ರೈಸ್, ಓಟ್ಸ್, ಮಾವಿನ ಹಣ್ಣು ಕಲ್ಲಂಗಡಿ ಹಣ್ಣು, ಯೋಗರ್ಟ್ ಮೊದಲಾದವುಗಳನ್ನು ಇವುಗಳ ಸೇವನೆಯನ್ನು ಮಿತಗೊಳಿಸಿ.
- •30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರ ಮೂಲಕ ದೇಹವನ್ನು ಸಕ್ರಿಯವಾಗಿ ಇಟ್ಟುಕೊಳ್ಳಬೇಕು ಇದರಿಂದ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು ದೇಹದಲ್ಲಿ ಕಡಿಮೆ ಆಗುತ್ತದೆ ದೇಹದ ತೂಕವು ಇಳಿಯುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿ ಇರುತ್ತದೆ.
ಮಳೆಗಾಲದಲ್ಲಿ ಕೇವಲ ಮಧುಮೇಹಿಗಳು ಮಾತ್ರವಲ್ಲದೆ ಮಕ್ಕಳು, ವಯಸ್ಕರು ವೃದ್ಧರು ಎಲ್ಲರೂ ಕೂಡ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಾತಾವರಣ ಮನಸ್ಸಿಗೆ ಹಿತವನಿಸಿದರೂ ಮೈಗೆ ಕಷ್ಟವಾಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ.